ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಅಗ್ರ ಸ್ಥಾನವನ್ನು ಉಳಿಸಿಕೊಂಡ ಕೊಹ್ಲಿ

Update: 2019-12-24 17:53 GMT

ಮುಂಬೈ, ಡಿ.24: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಉಪನಾಯಕ ಅಜಿಂಕ್ಯ ರಹಾನೆ ರ್ಯಾಂಕಿಂಗ್‌ನಲ್ಲಿ ಹಿಂಭಡ್ತಿ ಪಡೆದಿದ್ದಾರೆ.

ಮಂಗಳವಾರ ಪ್ರಕಟಗೊಂಡ ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದ ಕೊಹ್ಲಿ ಇದೀಗ 928 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ ಮತ್ತು ಸ್ಮಿತ್ ಅವರಿಗಿಂತ 17 ಪಾಯಿಂಟ್ ಮುಂದಿದ್ದಾರೆ.

   ನ್ಯೂಝಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಐದನೇ ಸ್ಥಾನ ಗಳಿಸಿದ್ದಾರೆ. ಸತತ ಮೂರು ಟೆಸ್ಟ್ ಇನಿಂಗ್ಸ್‌ಗಳಲ್ಲಿ ಕನಿಷ್ಠ 150 ರನ್ ಗಳಿಸಿರುವ ದಾಖಲೆ ಹೊಂದಿರುವ ಪಾಕಿಸ್ತಾನದ ಝಹೀರ್ ಅಬ್ಬಾಸ್ ಮತ್ತು ಮುದಸ್ಸರ್ ನಝರ್ ದಾಖಲೆಯನ್ನು ಸರಿಗಟ್ಟಯವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡ ಲಾಬುಶಾನೆ ಮೂರು ಸ್ಥಾನಗಳ ಭಡ್ತಿ ಪಡೆದಿದ್ದಾರೆ. ಅವರು ಐದನೇ ಸ್ಥಾನವನ್ನು ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಕರಾಚಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ಬಾಬರ್ ಆಝಮ್ ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮೂರು ಸ್ಥಾನಗಳ ಭಡ್ತಿ ಪಡೆಡಿದ್ದಾರೆ ಮತ್ತು 6ನೇ ಸ್ಥಾನ ಗಳಿಸಿದ್ದಾರೆ. ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ 7ನೇ ಸ್ಥಾನ,ರಹಾನೆ ನಂತರದ ಸ್ಥಾನವನ್ನು ಡೇವಿಡ್ ವಾರ್ನರ್(8ನೇ) , ಜೋ ರೂಟ್ (9ನೇ) ಮತ್ತು ರಾಸ್ ಟೇಲರ್ (10ನೇ) ಪಡೆದಿದ್ದಾರೆ.

ಟಾಪ್ 20 ರಲ್ಲಿ ಸ್ಥಾನ ಪಡೆದ ಇತರ ಇಬ್ಬರು ಭಾರತದ ಬ್ಯಾಟ್ಸ್‌ಮನ್‌ಗಳು ಮಾಯಾಂಕ್ ಅಗರ್ವಾಲ್ (12) ಮತ್ತು ರೋಹಿತ್ ಶರ್ಮಾ (15). ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಮೂರು ಸರಣಿಗಳಿಂದ 360 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ದೃಢಪಡಿಸಿದೆ. ನ್ಯೂಝಿಲ್ಯಾಂಡ್ ವಿರುದ್ಧ ಮೂರು ಟೆಸ್ಟ್ ಸರಣಿಯ ಆರಂಭಿಕ ಪಂದ್ಯವನ್ನು ಗೆದ್ದ ನಂತರ ಆಸ್ಟ್ರೇಲಿಯಾ 216 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಕರಾಚಿ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧದ ಗೆಲುವಿಗೆ ಪಾಕಿಸ್ತಾನ 60 ಅಂಕಗಳನ್ನು ಗಳಿಸಿ ಎರಡು ಪಂದ್ಯಗಳ ಸರಣಿಯ ಕೊನೆಯಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ 80 ಪಾಯಿಂಟ್‌ಗಳನ್ನು ಕಲೆ ಹಾಕಿವೆ. ರಾವಲ್ಪಿಂಡಿಯಲ್ಲಿ ನಡೆದ ಆರಂಭಿಕ ಟೆಸ್ಟ್ ಪಂದ್ಯವನ್ನು ಉಭಯ ತಂಡಗಳು ಡ್ರಾ ಮಾಡಿದ ನಂತರ ಶ್ರೀಲಂಕಾ ಅಂಕಗಳನ್ನು 80 ಕ್ಕೇರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News