ಮನು ಭಾಕೆರ್, ಅನೀಶ್ ಭನ್ವಾಲಾಗೆ ಚಿನ್ನ

Update: 2019-12-24 17:57 GMT

ಭೋಪಾಲ್, ಡಿ.24: ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ ಜೂನಿಯರ್ ಮತ್ತು ಸೀನಿಯರ್ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತದ ಮನು ಭಾಕರ್ ಚಿನ್ನ ಗೆದ್ದರೆ, ಪುರುಷರ 25 ಮೀಟರ್ ಕ್ಷಿಪ್ರ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅನೀಶ್ ಭನ್ವಾಲಾ ಚಿನ್ನ ಜಯಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಮನು ಭಾಕರ್ 241 ಸ್ಕೋರ್ ದಾಖಲಿಸಿ ಚಿನ್ನದ ಪದಕ ಗೆದ್ದರು

ಹಿರಿಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದೇವಂಶಿ ಧಮಾ ಬೆಳ್ಳಿ ಪಡೆದರು. ಹರ್ಯಾಣವನ್ನು ಪ್ರತಿನಿಧಿಸುವ 17 ವರ್ಷದ ಭಾಕೆರ್ ನಾಲ್ಕು ಚಿನ್ನದ ಪದಕಗಳನ್ನು (ಹಿರಿಯ ಮತ್ತು ಕಿರಿಯರ ವೈಯಕ್ತಿಕ ಮತ್ತು ತಂಡದ ಈವೆಂಟ್‌ಗಳನ್ನು) ಗೆದ್ದುಕೊಂಡರು. ಅವರ ರಾಜ್ಯದ ಸಹ ಆಟಗಾರ ಅನಿಶ್ ಕೂಡಾ ಹಿರಿಯ ಮತ್ತು ಕಿರಿಯ ಪುರುಷರ ವಿಭಾಗಗಳಲ್ಲಿ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದರು.

ಟೋಕಿಯೊ ಒಲಿಂಪಿಕ್ಸ್ ಕೋಟಾದಲ್ಲಿ ಅವಕಾಶ ಪಡೆದಿರುವ ಭಾಕೆರ್ 588 ಸ್ಕೋರ್ ದಾಖಲಿಸಿದರು. ಮತ್ತು ದಕ್ಷಿಣ ಏಶ್ಯ ಕ್ರೀಡಾಕೂಟದಲ್ಲಿ ಅನ್ನೂ ರಾಜ್ ಸಿಂಗ್ ಅವರು ನಿರ್ಮಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ. ದೇವಂಶಿ ಧಮಾ (237.8) ಮತ್ತು ಟೋಕಿಯೊ ಕೋಟಾ ವಿಜೇತ ಯಶಸ್ವಿನಿ ಸಿಂಗ್ ದೇಸ್ವಾಲ್ (217.7) ಕಂಚು ಗೆದ್ದರು. ಕ್ಷಿಪ್ರ ಫೈರ್ ಫೈನಲ್‌ನಲ್ಲಿ ಭನ್ವಾಲಾ 28 ರನ್ ಸ್ಕೋರ್ ದಾಖಲಿಸಿದ್ದು, ರಾಜಸ್ಥಾನದ ಭವೇಶ್ ಶೇಖಾವತ್ ಅವರನ್ನು ಹಿಂದಿಕ್ಕಿದರು. ಭನ್ವಾಲಾ ( 582 )ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News