ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಾರತಮ್ಯ ಎದುರಿಸಿದ್ದ ಕನೇರಿಯಾ: ಅಖ್ತರ್ ಆರೋಪ

Update: 2019-12-26 17:52 GMT

ಕರಾಚಿ, ಡಿ.26: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿದ್ದ ಏಕೈಕ ಹಿಂದೂ ಆಟಗಾರ ದನೇಶ್ ಕನೇರಿಯಾ ಪಾಕಿಸ್ತಾನದ ಸಹ ಆಟಗಾರರಿಂದ ತಾರತಮ್ಯ ಎದುರಿಸಿದ್ದರು. ಪಾಕ್ ಆಟಗಾರರು ಕನೇರಿಯಾ ಜೊತೆ ಒಂದೇ ಟೇಬಲ್‌ನಲ್ಲಿ ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದರು ಎಂದು ಮಾಜಿ ವೇಗದ ಬೌಲರ್ ಶುಐಬ್ ಅಖ್ತರ್ ಪಿಟಿವಿ ಸ್ಪೋರ್ಟ್ಸ್‌ನ ಚಾಟ್‌ಶೋವೊಂದರಲ್ಲಿ ಆರೋಪಿಸಿದ್ದಾರೆ.

ಕನೇರಿಯಾ ಪಾಕ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಎರಡನೇ ಹಿಂದೂ ಕ್ರಿಕೆಟಿಗನಾಗಿದ್ದು, 61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್‌ಗಳನ್ನು ಪಡೆದಿದ್ದರು. 18 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಕನೇರಿಯಾಗಿಂತ ಮೊದಲು ಅವರ ಚಿಕ್ಕಪ್ಪ ಅನಿಲ್ ದಲ್‌ಪತ್ ಪಾಕ್ ತಂಡವನ್ನು ಪ್ರತಿನಿಧಿಸಿದ್ದರು.

 ಅಖ್ತರ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಕನೇರಿಯಾ, ಅಖ್ತರ್ ಅವರ ಮಾತು ಅವರ ಬೌಲಿಂಗ್‌ನಂತೆಯೇ ಬಿರುಗಾಳಿಯಂತೆ ಇರುತ್ತದೆ. ನಾನು ಪಾಕ್ ತಂಡದಲ್ಲಿ ಆಡುತ್ತಿದ್ದಾಗ ಇಂತಹ ವಿಚಾರ ಮಾತನಾಡುವ ಧೈರ್ಯ ಇರಲಿಲ್ಲ. ನನಗೆ ಅಖ್ತರ್, ಇಂಝಿ ಬಾಯ್(ಇಂಝಮಮ್‌ವುಲ್ ಹಕ್), ಮುಹಮ್ಮದ್ ಯೂಸುಫ್ ಹಾಗೂ ಯೂನಿಸ್ ಭಾಯ್(ಯೂನಿಸ್ ಖಾನ್)ಬೆಂಬಲ ನೀಡಿದ್ದರು. ನನಗೆ ಬೆಂಬಲ ನೀಡದವರ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News