ಕೋಟಾ: ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ 10 ಶಿಶುಗಳು ಸಾವು

Update: 2019-12-27 16:52 GMT
ಸಾಂದರ್ಭಿಕ ಚಿತ್ರ

ಕೋಟಾ, ಡಿ. 27: ಎರಡು ದಿನಗಳಲ್ಲಿ 10 ಶಿಶುಗಳು ಮೃತಪಟ್ಟ ಬಗ್ಗೆ ರಾಜಸ್ಥಾನದ ಕೋಟಾದಲ್ಲಿರುವ ಜೆ ಕೆ ಲೋನ್ ಆಸ್ಪತ್ರೆ ತನಿಖೆಗೆ ಆದೇಶಿಸಿದೆ. ಡಿಸೆಂಬರ್ 13ರಂದು 6 ಶಿಶುಗಳು ಹಾಗೂ ಡಿಸೆಂಬರ್ 24ರಂದು 4 ಶಿಶುಗಳು ಮೃತಪಟ್ಟಿವೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಶಿಶುಗಳನ್ನು ಖಾಸಗಿ ಹಾಗೂ ಸರಕಾರಿ ಆರೋಗ್ಯ ಕೇಂದ್ರಗಳಿಂದ ಇಲ್ಲಿಗೆ ಶಿಫಾರಸು ಮಾಡಲಾಗಿತ್ತು. ಇಲ್ಲಿ ಪ್ರತಿ ದಿನ ಸರಾಸರಿ 1ರಿಂದ 3 ಶಿಶುಗಳು ಮೃತಪಟ್ಟಿವೆ. ಶಿಶುಗಳು ಮೃತಪಡದ ದಿನಗಳು ಕೂಡ ಇವೆ. ಆದರೆ, ಎರಡು ದಿನಗಳಲ್ಲಿ 10 ಶಿಶುಗಳು ಸಾವನ್ನಪ್ಪಿರುವುದು ಅಸಹಜ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಎಲ್.ಎಲ್. ಮೀನಾ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಿಶು ಮರಣ ಪ್ರಮಾಣ ಗಣನೀಯ ಇಳಿಕೆಯಾಗಿದೆ ಎಂದು ಕೂಡ ಮೀನಾ ಹೇಳಿದರು. 10 ಶಿಶುಗಳು ಸಾವನ್ನಪ್ಪಿರುವ ಪ್ರಕರಣದ ತನಿಖೆ ನಡೆಸಲು ಶಿಶು ರೋಗ ವಿಭಾಗದ ಶಿಶು ತಜ್ಞ ಡಾ. ಅಮೃತ್ ಲಾಲ್ ಬೈರವ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ರೂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News