ಮುದ್ರಾಂಕ ಶುಲ್ಕ ವಂಚನೆ:ಚು.ಆಯುಕ್ತ ಲವಾಸಾ ವಿರುದ್ಧ ತನಿಖೆಗೆ ಆದಾಯ ತೆರಿಗೆ ಇಲಾಖೆ ಸಜ್ಜು

Update: 2019-12-27 17:32 GMT
file photo

ಜೈಪುರ,ಡಿ.27: ಆದಾಯ ತೆರಿಗೆ ಇಲಾಖೆಯು ಮತ್ತೊಮ್ಮೆ ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರ ಹಿಂದೆ ಬಿದ್ದಿದೆ. ಗುರುಗ್ರಾಮದಲ್ಲಿಯ ಅಪಾರ್ಟ್‌ಮೆಂಟ್‌ವೊಂದನ್ನು ಲವಾಸಾರ ಪತ್ನಿ ನೊವೆಲ್ ಲವಾಸಾರ ಹೆಸರಿನಿಂದ ತನ್ನ ಸೋದರಿ ಶಕುಂತಲಾ ಲವಾಸಾರ ಹೆಸರಿಗೆ ವರ್ಗಾಯಿಸುವಾಗ ಮುದ್ರಾಂಕ ಶುಲ್ಕವನ್ನು ಅವರು ವಂಚಿಸಿದ್ದಾರೆ ಎಂದು ಇಲಾಖೆಯು ಈ ಬಾರಿ ಆರೋಪಿಸಿದೆ.

ಆದಾಯ ತೆರಿಗೆ ರಿಟರ್ನ್‌ಗಳು ಮತ್ತು ಆಸ್ತಿಯ ನೋಂದಾಯಿತ ವರ್ಗಾವಣೆ ಒಪ್ಪಂದಗಳ ನಡುವಿನ ‘ವ್ಯತ್ಯಾಸಗಳ’ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸುವಂತೆ ಸೂಚಿಸಿ ಇಲಾಖೆಯು ಹರ್ಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸುಆಯುಕ್ತರಿಗೆ ಪತ್ರ ಬರೆದಿದೆ.

ನೊವೆಲ್ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್‌ನಲ್ಲಿ ಗುರುಗ್ರಾಮದಲ್ಲಿಯ ನಾಲ್ಕು ಅಂತಸ್ತುಗಳ ಕಟ್ಟಡದ ಮೊದಲ ಅಂತಸ್ತನ್ನು 1.73 ಕೋ.ರೂ.ಗೆ ಶಕುಂತಲಾರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ ಮತ್ತು ಶಕುಂತಲಾ 2017-18ನೇ ಸಾಲಿನ ತನ್ನ ಆದಾಯ ತೆರಿಗೆ ರಿಟರ್ನ್‌ನಲ್ಲಿ ಇದೇ ಆಸ್ತಿಯನ್ನು ‘ಸ್ವಯಂ ವಾಸಸ್ಥಳ’ಎಂದು ತೋರಿಸಿದ್ದಾರೆ. ಆದರೆ ನೊವೆಲ್ ಈ ಆಸ್ತಿಯನ್ನು 2018,ಡಿ.27ರಂದು ಪತಿ ಲವಾಸಾರಿಗೆ ಉಡುಗೊರೆ ನೀಡಿದ್ದರು ಮತ್ತು ಲವಾಸಾ ಅದನ್ನು ಸೋದರಿ ಶಕುಂತಲಾಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವುದನ್ನು ನೋಂದಾಯಿತ ವರ್ಗಾವಣೆ ಒಪ್ಪಂದಗಳು ತೋರಿಸುತ್ತಿವೆ ಎಂದು ಇಲಾಖೆಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News