×
Ad

‘ಸಂದೇಹಾಸ್ಪದ ಪ್ರಾಮಾಣಿಕತೆ’ಯ ಐಪಿಎಸ್, ಐಎಎಸ್ ಅಧಿಕಾರಿಗಳ ಪಟ್ಟಿ ಕೇಳಿದ ಕೇಂದ್ರ ಗೃಹ ಸಚಿವಾಲಯ

Update: 2019-12-28 20:59 IST

ಹೊಸದಿಲ್ಲಿ, ಡಿ. 28: ‘ಸಂದೇಹಾಸ್ಪದ ಪ್ರಾಮಾಣಿಕತೆ’ ಇರುವ ಐಪಿಎಸ್, ಎಐಎಸ್, ಡಿಎಎನ್‌ಐಸಿಎಸ್ ಹಾಗೂ ಡಿಎಎನ್‌ಐಪಿಎಸ್ ಶಂಕಿತ ಅಧಿಕಾರಿಗಳ ಪಟ್ಟಿಯನ್ನು 2020 ಜನವರಿ 10ರ ಒಳಗೆ ಕಳುಹಿಸುವಂತೆ ದಿಲ್ಲಿ, ಗೋವಾ, ಅರುಣಾಚಲಪ್ರದೇಶ, ಮಿಝೊರಾಂ ಹಾಗೂ ಇತರ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೋಟಿಸು ಜಾರಿ ಮಾಡಿದೆ.

 2019-2020ಕ್ಕೆ ಅನುಗುಣವಾಗಿ ಐಎಎಸ್, ಐಪಿಎಸ್, ಡಿಎಎನ್‌ಐಸಿಎಸ್ (ದಿಲ್ಲಿ, ಅಂಡಮಾನ್ ಹಾಗೂ ನಿಕೋಬಾರ್ ಐಲ್ಯಾಂಡ್ ಸಿವಿಲ್ ಸರ್ವಿಸ್) ಹಾಗೂ ಡಿಎಎನ್‌ಐಪಿಎಸ್ (ದಿಲ್ಲಿ ಅಂಡಮಾನ್ ಹಾಗೂ ನಿಕೋಬಾರ್ ಐಲ್ಯಾಂಡ್) ಶಂಕಿತ ಅಧಿಕಾರಿಗಳ ಒಪ್ಪಿತ ಪಟ್ಟಿ ಸಿದ್ಧಪಡಿಸುವಂತೆ ಹಾಗೂ 2020 ಜನವರಿ 10ರ ಒಳಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿ ಕೊಡುವಂತೆ ಕೇಂದ್ರ ಗೃಹ ಸಚಿವಾಲಯ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ. ಸಂಬಂಧಿತ ಇಲಾಖೆಯ ಅಧಿಕಾರಿ ಹಾಗೂ ಸಿಬಿಐಯೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಾಮಾಣಿಕತೆ ಬಗ್ಗೆ ಸಂಶಯ ಇರುವ ಅಧಿಕಾರಿಗಳ ಒಪ್ಪಿತ ಪಟ್ಟಿಯನ್ನು ಗಜೆಟೆಡ್ ಶ್ರೇಣಿಯ ಅಧಿಕಾರಿಗಳು ಸಿದ್ಧಪಡಿಸಬೇಕು ಎಂದು ಕೇಂದ್ರ ಗೃಹಸಚಿವಾಯ ಸೂಚನೆ ನೀಡಿದೆ.

ಭಾರತೀಯ ಅಧಿಕಾರಶಾಹಿಯ ನಿಗೂಢ ಪಟ್ಟಿ ಎಂದು ಎಂದು ಕರೆಯಲಾಗುವ ಈ ಒಪ್ಪಿತ ಪಟ್ಟಿಯನ್ನು ಆರೋಪಗಳ ನಿಖರತೆ ಪರಿಶೀಲಿಸಲು ಸಿಬಿಐಯೊಂದಿಗೆ ಹಂಚಿಕೊಳ್ಳಬೇಕು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News