ಪೇಜಾವರ ಶ್ರೀ ನಿಧನ : ಡಿ.29ರ ಘಟನೆಗಳ ಪಕ್ಷಿನೋಟ

Update: 2019-12-29 17:16 GMT

ಡಿ. 29ರ ಮುಂಜಾನೆ 6:45: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದ ಪೇಜಾವರಶ್ರೀಗಳನ್ನು ರಥಬೀದಿಯ ಪೇಜಾವರ ಮಠಕ್ಕೆ ಕರೆತರಲು ಸಿದ್ಧತೆ ಪ್ರಾರಂಭ.

6:55: ವಿಶೇಷ ಅಂಬುಲೆನ್ಸ್‌ನಲ್ಲಿ ವೈದ್ಯರು, ನರ್ಸ್‌ಗಳ ಸಹಿತ ವೆಂಟಿಲೇಟರ್ ಸಹಿತ ಪೇಜಾವರಶ್ರೀಗಳು ಮಠದತ್ತ ಪ್ರಯಾಣ.

7:15: ಅಂಬುಲೆನ್ಸ್ ರಥಬೀದಿ ಮೂಲಕ ಪೇಜಾವರ ಮಠಕ್ಕೆ ಆಗಮನ. ಕೃತಕ ಉಸಿರಾಟ ವ್ಯವಸ್ಥೆಯೊಂದಿಗೆ ಶ್ರೀಗಳನ್ನು ಮಠದೊಳಗೆ ಕರೆದೊಯ್ದ ಸಿಬ್ಬಂದಿಗಳು.

9:15: ವೈದ್ಯರಿಂದ ವೆಂಟಿಲೇಟರ್ ವ್ಯವಸ್ಥೆ: ಮಠದ ಭಕ್ತರಿಂದ ಗೋವಿಂದ ಘೋಷಣೆಗಳ ಮೂಲಕ ಪೇಜಾವರಶ್ರೀಗಳ ನಿಧನದ ಘೋಷಣೆ. ಬಳಿಕ ಶಾಸಕ ರಘುಪತಿ ಭಟ್‌ರಿಂದ ಅಧಿಕೃತ ಘೋಷಣೆ. ಮುಂದಿನ ವ್ಯವಸ್ಥೆಗಳ ಪ್ರಕಟಣೆ.

9:50: ಪೇಜಾವರ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಪೇಜಾವರಶ್ರೀ ನಿಧನಕ್ಕೆ ಶೋಕಸಂದೇಶ, ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯ ಘೋಷಣೆ, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ನಿರ್ಧಾರ.

10 ಗಂಟೆಗೆ ವಿವಿಧ ಗಣ್ಯರ ಭೇಟಿ, ಶೋಕ ಸಂದೇಶ. ಕಣ್ಣೀರಿಟ್ಟ ಉಮಾ ಭಾರತಿ

10:20: ಶಂಖ, ಜಾಗಟೆ ನಾದದ ನಡುವೆ ಗೋವಿಂದ ಘೋಷಣೆ ಯೊಂದಿಗೆ ಬಿದಿರಿನ ಬುಟ್ಟಿಯಲ್ಲಿ ಪದ್ಮಾಸನದಲ್ಲಿ ಕುಳ್ಳಿರಿಸಿದ ಶ್ರೀಗಳ ಪಾರ್ಥಿವ ಶರೀರವನ್ನು ಮಠದಿಂದ ಹೊರತಂದು, ರಥಬೀದಿಯಲ್ಲಿ ಮೆರವಣಿಗೆ.

10:20: ಶಂಖ, ಜಾಗಟೆ ನಾದದ ನಡುವೆ ಗೋವಿಂದ ಘೋಷಣೆ ಯೊಂದಿಗೆ ಬಿದಿರಿನ ಬುಟ್ಟಿಯಲ್ಲಿ ಪದ್ಮಾಸನದಲ್ಲಿ ಕುಳ್ಳಿರಿಸಿದ ಶ್ರೀಗಳ ಪಾರ್ಥಿವ ಶರೀರವನ್ನು ಮಠದಿಂದ ಹೊರತಂದು, ರಥಬೀದಿಯಲ್ಲಿ ಮೆರವಣಿಗೆ. 10:30ಕ್ಕೆ ಪೇಜಾವರಶ್ರೀಗಳ ಪಾರ್ಥಿವ ಶರೀರವನ್ನು ಕನಕನ ಕಿಂಡಿಯ ಎದುರು ತಂದು ಕಿಂಡಿಯಿಂದ ಶ್ರೀಕೃಷ್ಣನ ದರ್ಶನ.

10:40: ಮಧ್ವ ಸರೋವರದಲ್ಲಿ ಬಿದುರು ಬುಟ್ಟಿ ಸಹಿತ ಮೂರು ಮುಳುಗು ಹಾಗೂ ಅಭಿಷೇಕ, ಗೋವಿಂದ ಪಾರಾಯಣ

10:50: ಮಠದೊಳಗೆ ತಂದು ತೀರ್ಥ ಮಂಟಪದಲ್ಲಿ ಪೇಜಾವರಶ್ರೀಗಳ ಕೈಯಿಂದಲೇ ಕೃಷ್ಣನಿಗೆ ಆರತಿ, 15 ನಿಮಿಷ ವಿವಿಧ ಪಾರಾಯಣ.

11:20: ಬಳಿಕ ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲೇ ಪಾರ್ಥಿವ ಶರೀರವನ್ನು ರಥಬೀದಿಗೆ ಒಂದು ಸುತ್ತು ತಂದು, ಸೋದೆ ಮಠದ ಎದುರು ಹೂವಿನಿಂದ ಅಲಂಕೃತ ಜೀಪ್‌ನಲ್ಲಿ ಇರಿಸಿ ಮೆರವಣಿಗೆಯಲ್ಲಿ ಅಜ್ಜರಕಾಡು ಮೈದಾನದತ್ತ ಪ್ರಯಾಣ ಕಲ್ಸಂಕ, ಬನ್ನಂಜೆ, ಬ್ರಹ್ಮಗಿರಿ ಮಾರ್ಗ.

12:10: ಅಜ್ಜರಕಾಡು ಮೈದಾನ ತಲುಪಿದ ಮೆರವಣಿಗೆ. ಸಕಲ ಸರಕಾರಿ ಗೌರವ ಅರ್ಪಣೆ. ಪೊಲೀಸರಿಂದ ಮರಣೋತ್ತರ ಗೌರವ ವಂದನೆ, ಮೂರು ಸುತ್ತಿ ಕುಶಾಲು ತೋಪು ಹಾರಿಸಲಾಯಿತು.

12:10: ಅಜ್ಜರಕಾಡು ಮೈದಾನ ತಲುಪಿದ ಮೆರವಣಿಗೆ. ಸಕಲ ಸರಕಾರಿ ಗೌರವ ಅರ್ಪಣೆ. ಪೊಲೀಸರಿಂದ ಮರಣೋತ್ತರ ಗೌರವ ವಂದನೆ, ಮೂರು ಸುತ್ತಿನ ಕುಶಾಲು ತೋಪು ಹಾರಿಸಲಾಯಿತು. 12:15: ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಅಂತಿಮ ನಮನ ಸಲ್ಲಿಕೆ. ಬಳಿಕ ನೆರೆದ ಸಚಿವರು, ಶಾಸಕರು, ವಿವಿಧ ಸ್ತರಗಳ ಜನಪ್ರತಿನಿಧಿಗಳು, ಗಣ್ಯರಿಂದ ಅಂತಿಮ ದರ್ಶನ.

12:30: ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ. ಸಾವಿರಾರು ಮಂದಿಯಿಂದ ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ. ಹಲವರಿಂದ ಕಣ್ಣೀರಿನ ಧಾರೆ.

1:30: ಶತಮಾನದ ದಾರ್ಶನಿಕ ಸಂತನಿಗೆ ಅವರ 80 ದಶಕಗಳ ಆಡಂಬೊಲವಾಗಿದ್ದ ಉಡುಪಿಯ ಅಂತಿಮ ವಿದಾಯ. ಮತ್ತೆ ಅಂಬುಲೆನ್ಸ್ ಏರಿದ ಶ್ರೀಗಳ ಪಾರ್ಥಿವ ಶರೀರ. ಆದಿಉಡುಪಿ ಹೆಲಿಪ್ಯಾಡ್‌ನತ್ತ ಧಾವಂತ.

1:55: ಆದಿಉಡುಪಿಯಲ್ಲಿ ಕಾದಿದ್ದ ಡಿಫೆನ್ಸ್ ಹೆಲಿಕಾಪ್ಟರ್‌ಗೆ ಪೇಜಾವರಶ್ರೀಗಳ ಪಾರ್ಥಿವ ಶರೀರದ ರವಾನೆ. ಉಡುಪಿಗೆ ಪೇಜಾವರಶ್ರೀ ಅಂತಿಮ ವಿದಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News