×
Ad

ಹೊಸದಿಲ್ಲಿಯ ಪ್ರಧಾನಿ ನಿವಾಸದ ಸಮೀಪ ಬೆಂಕಿ ಆಕಸ್ಮಿಕ

Update: 2019-12-30 20:07 IST

ಹೊಸದಿಲ್ಲಿ, ಡಿ. 30: ಹೊಸದಿಲ್ಲಿಯ 7 ಲೋಕ ಕಲ್ಯಾಣ ಮಾರ್ಗ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಸಮೀಪ ಸೋಮವಾರ ಸಂಜೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಮಾನ್ಯ ಮಾರ್ಗ್ ಸಂಕೀರ್ಣದ ಪ್ರದೇಶದಲ್ಲಿರುವ ವಿಶೇಷ ರಕ್ಷಣಾ ಗುಂಪಿ ನ (ಎಸ್‌ಪಿಜಿ) ಸ್ವಾಗತ ಕಚೇರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿತು. ಆದರೆ, ಅದರ ಸಮೀಪ ಇದ್ದ ಪ್ರಧಾನಿ ಅವರ ನಿವಾಸ ಅಥವಾ ಕಚೇರಿಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಪ್ರಧಾನಿ ಮಂತ್ರಿ ಅವರ ಕಚೇರಿ ಟ್ವೀಟ್ ಮಾಡಿದೆ. ಬೆಂಕಿ ನಿಯಂತ್ರಣದಲ್ಲಿ ಎಂದು ಕೂಡ ಟ್ವೀಟ್ ಹೇಳಿದೆ.

ಬೆಂಕಿ ಆಕಸ್ಮಿಕ ಸಂಭವಿಸಿದ ಮಾಹಿತಿ ತಿಳಿಯುತ್ತಲೇ ಅಗ್ನಿಶಾಮಕ ದಳದ 9 ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಬೆಂಕಿಯನ್ನು ಅದಾಗಲೇ ನಂದಿಸಿರುವುದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News