ಭಾರತ ಗಡಿಯುದ್ದಕ್ಕೂ ಮೊಬೈಲ್ ಸೇವೆ ಸ್ಥಗಿತಗೊಳಿಸಿದ ಬಾಂಗ್ಲಾ

Update: 2019-12-31 16:15 GMT

ಢಾಕಾ (ಬಾಂಗ್ಲಾದೇಶ), ಡಿ. 31: ಬಾಂಗ್ಲಾದೇಶ ಸರಕಾರವು ಭಾರತದೊಂದಿಗಿನ ಗಡಿಯುದ್ದಕ್ಕೂ ಮೊಬೈಲ್ ಜಾಲಗಳನ್ನು ಸ್ಥಗಿತಗೊಳಿಸಿದೆ. ಪ್ರಸಕ್ತ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಭದ್ರತಾ ಕಾರಣಗಳಿಗಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ಹೇಳಿದೆ. ಬಾಂಗ್ಲಾದ ಈ ಕ್ರಮದಿಂದಾಗಿ ಈ ವಲಯದ ಸುಮಾರು ಒಂದು ಕೋಟಿ ಮೊಬೈಲ್ ಬಳಕೆದಾರರು ತೊಂದರೆಗೊಳಗಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಮೊಬೈಲ್ ಸೇವಾ ಪೂರೈಕೆದಾರರು ಸೋಮವಾರ ಭಾರತದ ಗಡಿಯಿಂದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ.

ಭಾರತವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ ದಿನಗಳ ಬಳಿಕ ಬಾಂಗ್ಲಾದೇಶ ಸರಕಾರ ಈ ಕ್ರಮ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News