ಇಂದು ವೆಲೆನ್ಸಿಯಾದಲ್ಲಿ ‘ಆ್ಯಪಲ್ ಮಾರ್ಟ್’ ಶುಭಾರಂಭ

Update: 2020-01-02 04:48 GMT

ಮಂಗಳೂರು, ಜ.2: ಗ್ರಾಹಕರ ಸೇವೆಯಲ್ಲಿ ಕಳೆದ 35 ವರ್ಷಗಳಿಂದ ಮನೆಮಾತಾಗಿರುವ ಎ.ಕೆ. ಸಮೂಹ ಸಂಸ್ಥೆಯ ನಾಲ್ಕನೆಯ ಸೂಪರ್ ಮಾರ್ಕೆಟ್ ‘ಆ್ಯಪಲ್ ಮಾರ್ಟ್’ ನಗರದ ಕಂಕನಾಡಿ ಸಮೀಪದ ವೆಲೆನ್ಸಿಯಾ ಚರ್ಚ್ ರಸ್ತೆಯ ಲ್ಯಾಂಡ್ ಟ್ರೇಡ್ಸ್‌ನ ಇನ್‌ಸಿಗ್ನಿಯಾ ಅಪಾರ್ಟ್‌ಮೆಂಟ್‌ನಲ್ಲಿ ಜ.2ರಂದು ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.

ವೆಲೆನ್ಸಿಯಾ ಚಚ್‌ನ ಸಹಾಯಕ ಧರ್ಮಗುರು ರೆ.ಫಾ.ಜೋಸ್ವಿನ್ ಪ್ರವೀಣ್ ಡಿಸೋಜ ‘ಆ್ಯಪಲ್ ಮಾರ್ಟ್’ನ್ನು ಉದ್ಘಾಟಿಸಲಿದ್ದಾರೆ. ಎ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನ್ಯೂ ಇಂಡಿಯಾ ಕನ್‌ಸ್ಟ್ರಕ್ಸನ್‌ನ ಆಡಳಿತ ನಿರ್ದೇಶಕ ಬಿ. ಅಬ್ದುಲ್ ಅಝೀಝ್ ಹಸನ್ ಮತ್ತು ಡಾ. ರೋಶನ್ ಶೆಟ್ಟಿ ಎ., ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

*ಇದು ನಮ್ಮ ಸಂಸ್ಥೆಯ ನಾಲ್ಕನೆ ಸೂಪರ್ ಮಾರ್ಕೆಟ್ ಆಗಿದೆ. ಎಲ್ಲಾ ಬಗೆಯ ಗುಣಮಟ್ಟದ ಸಾಮಗ್ರಿಗಳನ್ನು ರಖಂ ಮತ್ತು ಚಿಲ್ಲರೆಯಾಗಿ ಮಾರಾಟ ಮಾಡಲಾಗುವುದು. ಮಂಗಳೂರು ನಗರ ಮತ್ತು ಗ್ರಾಮಾಂತರ ಸಹಿತ ಮತ್ತಷ್ಟು ಸೂಪರ್ ಮಾರ್ಕೆಟ್ಗಳನ್ನು ತೆರೆಯುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಕಳೆದ 35 ವರ್ಷಗಳಿಂದ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಿದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಸಂಸ್ಥೆಯ ಪಾಲುದಾರ ಎ.ಕೆ. ನಾಝಿಮ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಕ್ಲೆನ್ಝ್‌ಆಫ್ ಬಿಡುಗಡೆ: ಎ.ಕೆ. ಸಮೂಹ ಸಂಸ್ಥೆಯ ನೂತನ ಉತ್ಪನ್ನಗಳಲ್ಲಿ ಒಂದಾದ ಕ್ಲೆನ್ಝ್‌ಆಫ್ ಬಿಡುಗಡೆಯು ಈ ಸಂದರ್ಭ ನಡೆಯಲಿದೆ. ಶೌಚಾಲಯ, ಸ್ನಾನಗೃಹ ಸಹಿತ ಬೇಸಿನ್‌ಗಳನ್ನು ಶುಭ್ರಗೊಳಿಸುವ ಕ್ಲೆನ್ಝ್‌ಆಫ್ ಮೂರು ಫ್ಲೇವರ್‌ಗಳಲ್ಲಿ ಲಭ್ಯವಿರುತ್ತವೆ. ಗುರುವಾರದಿಂದ ಎಲ್ಲ ಮಾರುಕಟ್ಟೆಗಳಲ್ಲಿ ಮಿತದರದಲ್ಲಿ ಇವು ಗ್ರಾಹಕರಿಗೆ ಲಭಿಸಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News