ವೆಲೆನ್ಸಿಯಾದಲ್ಲಿ ‘ಆ್ಯಪಲ್ ಮಾರ್ಟ್’ ಶುಭಾರಂಭ

Update: 2020-01-02 06:01 GMT

ಮಂಗಳೂರು, ಜ.2: ಗ್ರಾಹಕರ ಸೇವೆಯಲ್ಲಿ ಕಳೆದ 35 ವರ್ಷಗಳಿಂದ ಮನೆಮಾತಾಗಿರುವ ಎ.ಕೆ. ಸಮೂಹ ಸಂಸ್ಥೆಯ ನಾಲ್ಕನೆಯ ಸೂಪರ್ ಮಾರ್ಕೆಟ್ ‘ಆ್ಯಪಲ್ ಮಾರ್ಟ್’ ನಗರದ ಕಂಕನಾಡಿ ಸಮೀಪದ ವೆಲೆನ್ಸಿಯಾ ಚರ್ಚ್ ರಸ್ತೆಯ ಲ್ಯಾಂಡ್ ಟ್ರೇಡ್ಸ್‌ನ ಇನ್‌ಸಿಗ್ನಿಯಾ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಶುಭಾರಂಭಗೊಂಡಿತು.

ವೆಲೆನ್ಸಿಯಾ ಚಚ್‌ನ ಸಹಾಯಕ ಧರ್ಮಗುರು ರೆ.ಫಾ.ಜೋಸ್ವಿನ್ ಪ್ರವೀಣ್ ಡಿಸೋಜ ‘ಆ್ಯಪಲ್ ಮಾರ್ಟ್’ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುವಲ್ಲಿ ಎ.ಕೆ. ಸಮೂಹ ಸಂಸ್ಥೆಯು ಮನೆ ಮಾತಾಗಿದೆ. ಮುಂದೆಯೂ ಇನ್ನಷ್ಟು ಸೇವೆ ನೀಡಿ ಗ್ರಾಹಕರ ಮನ ಗೆಲ್ಲಲಿ ಎಂದು ಆಶಿಸಿದರು.

ಸಿಟಿ ಆಸ್ಪತ್ರೆ ಸಂಶೋಧನಾ ಮತ್ತು ಡಯಾಗ್ನಿಸ್ಟಿಕ್ ಸೆಂಟರ್‌ನ ಪ್ರಖ್ಯಾತ ವೈದ್ಯ ಡಾ.ರೋಶನ್ ಶೆಟ್ಟಿ ಎ. ‘ಆ್ಯಪಲ್ ಮಾರ್ಟ್’ನ ತರಕಾರಿ ಮತ್ತು ಹಣ್ಣು ಹಂಪಲು ವಿಭಾಗವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ‘ನಾನು ಕಳೆ 25 ವರ್ಷಗಳಿಂದ ಎ.ಕೆ. ಸಮೂಹ ಸಂಸ್ಥೆಯ ಕುಟುಂಬದ ಸದಸ್ಯರನ್ನು ಅತೀ ಹತ್ತಿರದಿಂದ ಕಂಡವನು. ಉದ್ಯಮದ ಬಹುತೇಕ ರಂಗದಲ್ಲಿ ತೊಡಗಿಸಿಕೊಂಡು ಅವುಗಳ ಪ್ರಗತಿಗಾಗಿ ಶ್ರಮಿಸುತ್ತಿರುವವರು. ಇದೀಗ ದಿನ ಬಳಕೆಯ ಆಹಾರ ಮತ್ತಿತರ ಸಾಮಗ್ರಿಗಳ ಮಾರಾಟದ ನಾಲ್ಕನೆಯ ಮಳಿಗೆಯನ್ನು ತೆರೆದು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಎಕೆ ಸಮೂಹ ಸಂಸ್ಥೆಯು ಈ ಉದ್ಯಮದಲ್ಲೂ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಎ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎ.ಕೆ.ಸಮೂಹ ಸಂಸ್ಥೆಯ ಪಾಲುದಾರರು, ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.

*ಕ್ಲೆನ್ಝ್‌ಆಫ್ ಬಿಡುಗಡೆ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯೂ ಇಂಡಿಯಾ ಕನ್‌ಸ್ಟ್ರಕ್ಸನ್‌ನ ಆಡಳಿತ ನಿರ್ದೇಶಕ ಬಿ. ಅಬ್ದುಲ್ ಅಝೀಝ್ ಹಸನ್ ಅವರು ಎ.ಕೆ. ಸಮೂಹ ಸಂಸ್ಥೆಯ ನೂತನ ಉತ್ಪನ್ನಗಳಲ್ಲಿ ಒಂದಾದ ‘ಕ್ಲೆನ್ಝ್‌ಆಫ್’ನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸರ್ವರ ಕಠಿಣ ಪರಿಶ್ರಮದಿಂದ ಎಕೆ ಸಮೂಹ ಸಂಸ್ಥೆಯು ಉನ್ನತ ಮಟ್ಟಕ್ಕೇರಿದೆ. ಜನರ ವಿಶ್ವಾಸದಿಂದ ಸಂಸ್ಥೆಯು ಮತ್ತಷ್ಟು ಪ್ರಗತಿ ಹೊಂದಲಿ, ಭವಿಷ್ಯದ ದಿನಗಳು ಉಜ್ವಲಗೊಳ್ಳಲಿ ಎಂದು ಶುಭ ಹಾರೈಸಿ.

ಶೌಚಾಲಯ, ಸ್ನಾನಗೃಹ ಸಹಿತ ಬೇಸಿನ್‌ಗಳನ್ನು ಶುಭ್ರಗೊಳಿಸುವ ಕ್ಲೆನ್ಝ್‌ಆಫ್ ಮೂರು ಫ್ಲೇವರ್‌ಗಳಲ್ಲಿ ಲಭ್ಯವಿರುತ್ತವೆ. ಗುರುವಾರದಿಂದ ಎಲ್ಲ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಇವು ಮಿತದರದಲ್ಲಿ ಲಭಿಸಲಿವೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News