ಕೋಟಾದ ಆಸ್ಪತ್ರೆಯಲ್ಲಿ ಇನ್ನಿಬ್ಬರು ಮಕ್ಕಳು ಮೃತ್ಯು: ಸಾವಿನ ಸಂಖ್ಯೆ 106ಕ್ಕೇರಿಕೆ
Update: 2020-01-03 19:56 IST
ಕೋಟಾ: ರಾಜಸ್ಥಾನದ ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಇಂದು ಮೃತಪಟ್ಟಿದ್ದು, ಈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಕ್ಕಳ ಸಂಖ್ಯೆ 106ಕ್ಕೇರಿದೆ. 2019ರ ಡಿಸೆಂಬರ್ ನಲ್ಲಿ ಈ ಸರಕಾರಿ ಆಸ್ಪತ್ರೆಯಲ್ಲಿ 100 ಮಕ್ಕಳು ಮೃತಪಟ್ಟಿದ್ದರೆ, 2020ರ ಜನವರಿಯಲ್ಲಿ 6 ಮಕ್ಕಳು ಮೃತಪಟ್ಟಿದ್ದಾರೆ.
ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ 2014ರಿಂದ 2019ಕ್ಕೆ ಹೋಲಿಸಿದರೆ ಮಕ್ಕಳ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.