ಆಸ್ಟ್ರೇಲಿಯ ಕಾಡ್ಗಿಚ್ಚು: 48 ಕೋಟಿ ಪ್ರಾಣಿಗಳ ಮಾರಣ ಹೋಮ

Update: 2020-01-03 17:28 GMT
file photo

ಸಿಡ್ನಿ, ಜ. 3: ಆಸ್ಟ್ರೇಲಿಯದಲ್ಲಿ ಸೆಪ್ಟಂಬರ್‌ನಿಂದ ಉರಿಯುತ್ತಿರುವ ಭೀಕರ ಕಾಡ್ಗಿಚ್ಚಿನಲ್ಲಿ ಸುಮಾರು 48 ಕೋಟಿ ಪ್ರಾಣಿಗಳು ಸತ್ತಿರಬಹುದು ಹಾಗೂ ಈ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಮೃತಪಟ್ಟ 48 ಕೋಟಿ ಸಸ್ತನಿಗಳು, ಹಕ್ಕಿಗಳು ಮತ್ತು ಸರೀಸೃಪಗಳ ಪೈಕಿ ಹೆಚ್ಚಿನವುಗಳು ಬೆಂಕಿಯಲ್ಲಿ ಬೆಂದು ಹೋಗಿರಬಹುದು ಅಥವಾ ವಾಸಸ್ಥಳದ ನಷ್ಟದಿಂದಾಗಿ ಹಸಿದು ಸತ್ತಿರಬಹುದು ಎಂದು ಸಿಡ್ನಿ ವಿಶ್ವವಿದ್ಯಾನಿಲಯದ ಕ್ರಿಸ್ ಡಿಕ್‌ಮನ್ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ತಿಳಿದುಬಂದಿದೆ.

  ‘‘ತೀವ್ರವಾಗಿ ಸುಟ್ಟ ಪ್ರದೇಶಗಳಲ್ಲಿ ಆಶ್ರಯದ ಕೊರತೆ, ಆಹಾರದ ಕೊರತೆ ಮತ್ತು ಬೇಟೆಯಾಡುವ ಪ್ರಾಣಿಗಳ ದಾಳಿಯಿಂದಾಗಿ ಇತರ ಪ್ರಾಣಿಗಳ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತವಾಗಿದೆ’’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕ್‌ಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News