×
Ad

ಅಮೆರಿಕದ ಮೇಲೆ ಪ್ರತಿದಾಳಿಗೆ ಮುಂದಾದರೆ ಇರಾನ್‌ನ 52 ಸ್ಥಳಗಳ ಮೇಲೆ ದಾಳಿ: ಟ್ರಂಪ್ ಎಚ್ಚರಿಕೆ

Update: 2020-01-05 10:29 IST

ವಾಷಿಂಗ್ಟನ್, ಜ.5: ಅಮೆರಿಕದ ಪ್ರಜೆಗಳ ಮೇಲೆ ಅಥವಾ ಆಸ್ತಿ-ಪಾಸ್ತಿಗಳ ಮೇಲೆ ಇರಾನ್ ಪ್ರತಿ ದಾಳಿ ನಡೆಸಿದರೆ ಅಮೆರಿಕವು ಇರಾನ್‌ನ 52 ಸ್ಥಳ ಮೇಲೆ ಗುರಿ ಇಟ್ಟು ಅತ್ಯಂತ ವೇಗ ಹಾಗೂ ಅತ್ಯಂತ ಕಠಿಣವಾಗಿ ಪ್ರತಿ ದಾಳಿ ನಡೆಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಮುಖ್ಯಸ್ಥ ಕಾಸಿಮ್ ಸುಲೈಮಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿರುವ ಬೆನ್ನಲ್ಲೇ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ಕಾಸಿಮ್ ಸುಲೈಮಾನಿ ಅವರನ್ನು ಬಗ್ದಾದ್‌ನಲ್ಲಿ ವಾಯು ದಾಳಿಯಲ್ಲಿ  ಕೊಂದಿರುವ ತನ್ನ ದೇಶದ ಕ್ರಮವನ್ನು ಟ್ರಂಪ್ ಸಮರ್ಥಿಸಿಕೊಂಡರು.

ಪ್ರತಿ ದಾಳಿಗೆ ಸಂಚು ರೂಪಿಸುತ್ತಿರುವ ಇರಾನ್‌ಗೆ ಸರಣಿ ಟ್ವೀಟ್‌ಗಳ ಮೂಲಕ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮೇಲೆ ದಾಳಿ ನಡೆದರೆ ಇರಾನ್‌ನ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹಾಗೂ ಪ್ರಮುಖ ಸ್ಥಳಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗುವುದು. ಇರಾನ್ ಸೇರಿದಂತೆ 52 ಸ್ಥಳಗಳ ಮೇಲೆ ನಿಗಾ ಇಡಲಾಗಿದೆ. ಅಮೆರಿಕ ಇನ್ನಷ್ಟು ಬೆದರಿಕೆಯನ್ನು ಬಯಸುವುದಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News