×
Ad

ಗುಜರಾತ್ ನ 2 ಸರಕಾರಿ ಆಸ್ಪತ್ರೆಗಳಲ್ಲಿ 200 ಮಕ್ಕಳು ಮೃತ್ಯು: ಪ್ರಶ್ನೆಗೆ ಉತ್ತರಿಸದೆ ತೆರಳಿದ ಸಿಎಂ ರೂಪಾನಿ

Update: 2020-01-05 16:02 IST

ಹೊಸದಿಲ್ಲಿ: ಗುಜರಾತ್ ನ ರಾಜಕೋಟ್ ಮತ್ತು ಅಹ್ಮದಾಬಾದ್ ನ ಸರಕಾರಿ ಆಸ್ಪತ್ರೆಗಳಲ್ಲಿ 200 ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಸಿಎಂ ವಿಜಯ್ ರೂಪಾನಿ ಏನೂ ಪ್ರತಿಕ್ರಿಯೆ ನೀಡದೆ ತೆರಳಿದ ಘಟನೆ ನಡೆದಿದೆ.

ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಆಡಳಿತ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

"ರಾಜಕೋಟ್ ಆಸ್ಪತ್ರೆಯಲ್ಲಿ 134 ಮಕ್ಕಳು ಮತ್ತು ಅಹ್ಮದಾಬಾದ್ ಆಸ್ಪತ್ರೆಯಲ್ಲಿ 85 ಮಕ್ಕಳು ಸಾವನ್ನಪ್ಪಿದ್ದಾರೆ. ನರೇಂದ್ರ ಮೋದಿ ಮತ್ತು ಹರ್ಷವರ್ಧನ್ ಅವರು ಈಗಲೂ ಮೌನವಾಗಿರುತ್ತಾರೆಯೇ. ಈ ದುರಂತದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತವೆ ಎಂದು ನಂಬಿಕೆಯಿದೆ" ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಶ್ಮಿತಾ ದೇವಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News