ಮಾಡಿದ ಫಲವನ್ನು ಉಣ್ಣುತ್ತಿದ್ದಾರೆ: ಜೆಎನ್ ಯು ದಾಳಿ ಬಗ್ಗೆ ಬಿಜೆಪಿ ಮುಖಂಡ ದಿಲೀಪ್ ಘೋಷ್

Update: 2020-01-06 17:58 GMT
file photo

ಕೋಲ್ಕತಾ, ಜ.6: ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಹಿಂಸಾಚಾರ ಎಡಪಕ್ಷಗಳ ಕೊಡುಗೆಯಾಗಿದ್ದು, ಮಾಡಿದ ಫಲವನ್ನು ಅವರು ಉಣ್ಣುತ್ತಿದ್ದಾರೆ. ಈ ಹಿಂದೆ ಅವರು ಮಾಡಿದ್ದ ಕಾರ್ಯದ ಲೆಕ್ಕವನ್ನು ಈಗ ಚುಕ್ತಾ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ವಿದ್ಯಾರ್ಥಿಗಳ ರಾಜಕೀಯದಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಹಿಂಸಾಚಾರ ಪ್ರಕರಣ ಎಡಪಕ್ಷಗಳ ವಿದ್ಯಾರ್ಥಿ ಘಟಕದ ಕೊಡುಗೆಯಾಗಿದೆ. ಎಡಪಕ್ಷಗಳು ಅಧಿಕಾರದಲ್ಲಿರುವ ಅಥವಾ ಕೆಲ ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಪಶ್ಚಿಮ ಬಂಗಾಳ, ಕೇರಳ, ತ್ರಿಪುರಾಗಳಲ್ಲಿ ಇಂತಹ ಘಟನೆಗಳನ್ನು ನಾವೆಲ್ಲಾ ನೋಡಿದ್ದೇವೆ ಎಂದು ಘೋಷ್ ಹೇಳಿದ್ದಾರೆ.

ಈ ಮಧ್ಯೆ, ರವಿವಾರದ ಹಿಂಸಾಚಾರ ಎಸಗಿದವರು ಎಬಿವಿಪಿ ಕಾರ್ಯಕರ್ತರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಫೋಟೋ ತೆಗೆಯದಂತೆ ಅಲ್ಲಿದ್ದ ಪತ್ರಕರ್ತರನ್ನು ಬೆದರಿಸಿದ ಗುಂಪು, ಸ್ವರಾಜ್ ಇಂಡಿಯಾ ಸಂಘಟನೆಯ ಅಧ್ಯಕ್ಷ ಯೋಗೇಂದ್ರ ಯಾದವ್ ಮೇಲೆ ಹಲ್ಲೆ ಮಾಡಿದೆ. ಪೊಲೀಸರ ಉಪಸ್ಥಿತಿಯಲ್ಲೇ ಎಬಿವಿಪಿ ಕಾರ್ಯಕರ್ತರು ಲಾಠಿ, ಕಬ್ಬಿಣದ ರಾಡ್, ಸುತ್ತಿಗೆ ಹಿಡಿದುಕೊಂಡು ಕ್ಯಾಂಪಸ್ ಪ್ರವೇಶಿಸಿದ್ದರೂ ಪೊಲೀಸರು ಸುಮ್ಮನಿದ್ದರು. ಇಟ್ಟಿಗೆಯನ್ನು ಎಸೆದು, ಹಾಸ್ಟೆಲ್ ಗೋಡೆಯನ್ನು ಹಾರಿ ಒಳಪ್ರವೇಶಿಸಿ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News