×
Ad

ಸಿಎಎ-ಎನ್‍ಆರ್ ಸಿ 'ಮಾರಕ ಜೋಡಿ' ಎಂದ ಅಂಜನಾ ಓಂ ಕಶ್ಯಪ್!

Update: 2020-01-08 15:31 IST

ಹೊಸದಿಲ್ಲಿ: ಬಿಜೆಪಿ ಬೆಂಬಲತೆ ಎಂದೇ ತಿಳಿಯಲ್ಪಟ್ಟಿರುವ ಆಜ್ ತಕ್ ಸುದ್ದಿ ವಾಹಿನಿಯ ಅಂಜನಾ ಓಂ ಕಶ್ಯಪ್ ಅವರು ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಪ್ರಸ್ತಾವಿತ ಎನ್‍ಆರ್ ಸಿ ಜತೆಗೂಡಿದರೆ ಅದೊಂದು `ಮಾರಕ ಸಂಯೋಜನೆ' (ಲೀಥಲ್ ಕಾಂಬಿನೇಶನ್) ಆಗಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ನೇರಪ್ರಸಾರದ ವೆಬ್ ಚಾಟ್ ಒಂದರಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಅಗತ್ಯ ದಾಖಲೆಗಳಿಲ್ಲವೆಂದು ಹೊರಗುಳಿಯಲ್ಪಟ್ಟವರಲ್ಲಿ ಹೊಸ ಪೌರತ್ವ ಕಾಯಿದೆಯಡಿ ಹಿಂದುಗಳನ್ನು ದೇಶದ ನಾಗರಿಕರನ್ನಾಗಿಸಲಾಗುದಾದರೆ, ಮುಸ್ಲಿಮರು ನಿಜವಾಗಿಯೂ ಈ ದೇಶದ ನಾಗರಿಕರಾಗಿರುವ ಹೊರತಾಗಿಯೂ ಅವರಿಗೆ ಪೌರತ್ವ ದೊರೆಯುವುದಿಲ್ಲ'' ಎಂದು ಅವರು ಹೇಳಿದ್ದಾರೆ.

``ಪೌರತ್ವ ಕಾಯ್ದೆ ಅದಾಗಿಯೇ ಹೊಸತೇನಲ್ಲ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ (ಹಿಂದಿನ ಪೂರ್ವ ಪಾಕಿಸ್ತಾನ) ದೌರ್ಜನ್ಯಕ್ಕೀಡಾಗಿರುವ ಅಲ್ಪಸಂಖ್ಯಾತರಿಗೆ ಭಾರತಕ್ಕೆ ಬರಲು ಅವಕಾಶವೊದಗಿಸಬೇಕು ಎಂದು ನಾಯಕರಾದ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರು ದೇಶ ವಿಭಜನೆಯ ಸಂದರ್ಭ ಹೇಳಿದ್ದರು'' ಎಂದ ಅಂಜನಾ ``ದೇಶಾದ್ಯಂತ ಎನ್‍ಆರ್‍ಸಿಗೆ ವಿರೋಧ ಹೆಚ್ಚಾಗುತ್ತಿದೆ ಹಾಗೂ ಸರಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕಿದೆ'' ಎಂದು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News