ಇರಾಕಿಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ಕೇಂದ್ರದ ಸೂಚನೆ

Update: 2020-01-08 14:31 GMT

ಹೊಸದಿಲ್ಲಿ,ಜ.8: ಇರಾಕ್‌ನಲ್ಲಿಯ ಪ್ರಚಲಿತ ಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಸೂಚನೆಯವರೆಗೆ ಆ ರಾಷ್ಟ್ರಕ್ಕೆ ಅನಗತ್ಯ ಪ್ರಯಾಣವನ್ನು ಕೈಗೊಳ್ಳದಂತೆ ತನ್ನ ಪ್ರಜೆಗಳಿಗೆ ಕೇಂದ್ರವು ಬುಧವಾರ ಸೂಚನೆ ನೀಡಿದೆ.

ತನ್ನ ಹಿರಿಯ ಸೇನಾಧಿಕಾರಿ ಜನರಲ್ ಕಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಬುಧವಾರ ಇರಾಕ್‌ನಲ್ಲಿಯ ಎರಡು ಅಮೆರಿಕ ಸೇನಾನೆಲೆಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ.

ಇರಾಕ್‌ ನಲ್ಲಿ ವಾಸವಾಗಿರುವ ಭಾರತೀಯರು ಎಚ್ಚರಿಕೆಯಿಂದಿರಬೇಕು ಮತ್ತು ಆ ರಾಷ್ಟ್ರದೊಳಗೆ ಪ್ರಯಾಣಿಸುವುದನ್ನು ಕೈಬಿಡಬೇಕು ಎಂದೂ ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಇರಾಕ್‌ನಲ್ಲಿರುವ ಭಾರತೀಯರಿಗೆ ಎಲ್ಲ ಸೇವೆಗಳನ್ನು ಒದಗಿಸಲು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಎರ್ಬಿಲ್‌ನಲ್ಲಿಯ ದೂತಾವಾಸ ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News