ಸಿಎಎ ವಿರೋಧಿಸಲು ಮುಸ್ಲಿಂ ಯುವಕನನ್ನು ಗ್ರಾಪಂ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಹಿಂದೂ ಬಾಹುಳ್ಯದ ಗ್ರಾಮಸ್ಥರು
ತಿರುಚ್ಚಿ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವವರಿಗೆ ಬೆಂಬಲ ಸೂಚಿಸಲು ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಹಿಂದೂ ಬಾಹುಳ್ಯದ ಗ್ರಾಮವೊಂದು ಮುಸ್ಲಿಂ ಯುವಕನೊಬ್ಬನನ್ನು ಗ್ರಾಮದ ಅಧ್ಯಕ್ಷನಾಗಿ ಆಯ್ಕೆ ಮಾಡಿದೆ.
ಇಲ್ಲಿನ ಸೆರಿಯಲೂರ್ ಇನಂ ಗ್ರಾಮದಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಮುಹಮ್ಮದ್ ಜಿಯಾವುದ್ದೀನ್ 554 ಮತಗಳನ್ನು ಗಳಿಸಿ ಜಯಿಸಿದ್ದಾರೆ. ಇಲ್ಲಿ ಒಟ್ಟು 1360 ಮತಗಳು ಚಲಾವಣೆಯಾಗಿವೆ. ಇದರಲ್ಲಿ ಜಿಯಾವುದ್ದೀನ್ 554 ಮತಗಳನ್ನು ಗಳಿಸಿದ್ದು, ಜಯಶಾಲಿಯಾಗಿದ್ದಾರೆ. ಆದರೆ ಇಲ್ಲಿನ ಕೇವಲ 60 ಮುಸ್ಲಿಂ ಮತಗಳಿವೆ.
"ಐವರು ಅಭ್ಯರ್ಥಿಗಳಲ್ಲೊಬ್ಬರಾದ ಶಂಕರ್ ಜಿಯಾವುದ್ದೀನ್ ಗಿಂತ 17 ಕಡಿಮೆ ಮತಗಳನ್ನು ಗಳಿಸಿದರ" ಎಂದು ರಾಜಗೋಪಾಲ್ ಎಂಬವರು ತಿಳಿಸಿದ್ದಾರೆ. ಇವರು ಜಿಯಾವುದ್ದೀನ್ ಗೆ ಬೆಂಬಲ ಸೂಚಿಸಿದ್ದವರಲ್ಲೊಬ್ಬರು.
"ಸಿಎಎ ಮೂಲಕ ಕೇಂದ್ರ ಸರಕಾರ ಧರ್ಮಗಳ ಆಧಾರದಲ್ಲಿ ಜನರನ್ನು ಒಡೆಯುವಾಗ ಈ ಗ್ರಾಮದ ಹಿಂದೂಗಳು ಗ್ರಾಮವು ಒಗ್ಗಟ್ಟಾಗಿ ಮತ್ತು ಜಾತ್ಯಾತೀತವಾಗಿ ಉಳಿಯಬೇಕೆಂದು ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿದರು" ಎಂದು ಗ್ರಾಮಸ್ಥರಲ್ಲೊಬ್ಬರಾದ ಎಸ್.ವಿ. ಕಾಮರಾಸು ತಿಳಿಸಿದ್ದಾರೆ.