×
Ad

ಗೇಟ್‌ವೇಯಲ್ಲಿ ಪ್ರತಿಭಟನೆ: ನಟ ಸುಶಾಂತ್ ಸಿಂಗ್, ವಿದ್ಯಾರ್ಥಿ ನಾಯಕ, ವಕೀಲರ ವಿರುದ್ಧ ಎಫ್‌ಐಆರ್

Update: 2020-01-09 23:30 IST
ಫೈಲ್ ಫೋಟೊ | ಫೋಟೊ ಕೃಪೆ: Twitter

ಮುಂಬೈ, ಜ. 9: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ನಡೆಸಿದ ಹಲ್ಲೆ ವಿರುದ್ಧ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ನಟ, ವಿದ್ಯಾರ್ಥಿ ನಾಯಕ ಹಾಗೂ ಮಾನವ ಹಕ್ಕುಗಳ ವಕೀಲ ಕೂಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೇಟ್‌ವೇ ಆಫ್ ಇಂಡಿಯಾದಲ್ಲಿ 34 ಗಂಟೆಗಳ ಕಾಲ ನಿರಂತರ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ 350ಕ್ಕೂ ಅಧಿಕ ವ್ಯಕ್ತಿಗಳ ವಿರುದ್ಧ ಕೊಲಾಬಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕಾನೂನು ಬಾಹಿರ ಸೇರುವಿಕೆ ಹಾಗೂ ಮುಂಬೈ ಪೊಲೀಸ್ ಆಯುಕ್ತರು ನೀಡಿದ ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಟಿ.ವಿ. ನಟ ಸುಶಾಂತ್ ಸಿಂಗ್, ಜೆಎನ್‌ಯುನ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್, ಮಾನವ ಹಕ್ಕುಗಳ ವಕೀಲ ಮಿಹಿರ್ ದೇಸಾಯಿ, ಟಿಐಎಸ್‌ಎಸ್‌ನ ಪ್ರಾಧ್ಯಾಪಕ ಮೀನಾ ಗೋಪಾಲ್, ವಿದ್ಯಾರ್ಥಿ ನಾಯಕರಾದ ಶೇಫಾಲಿ ಸೈನಿ, ಬಿಲಾಲ್ ಖಾನ್, ಸುವರ್ಣ ಸಬ್ಲಾ ಹಾಗೂ ಫಿರೋಝ್ ಮಿಥಿಬೋರ್ವಾಲಾ ಮೊದಲಾದವರು ಸೇರಿದ್ದಾರೆ. ಕೊಲಾಬಾ ಪೊಲೀಸ್ ಠಾಣೆಯ ಎಫ್‌ಐಆರ್‌ನಲ್ಲಿ ದಾಖಲಿಸಲಾದ ಕೆಲವು ವ್ಯಕ್ತಿಗಳ ಹೆಸರು ಹುತಾತ್ಮ ಚೌಕ್‌ನಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತಾ ರಮಾಭಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಕೂಡ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News