×
Ad

ಜೆಎನ್‌ಯುಗೆ ದೀಪಿಕಾ ಪಡುಕೋಣೆ ಭೇಟಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು?

Update: 2020-01-10 14:51 IST

ಹೊಸದಿಲ್ಲಿ: ರವಿವಾರ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿ ವ್ಯಕ್ತಿಗಳು ನಡೆಸಿದ ದಾಳಿಯನ್ನು ಖಂಡಿಸಿ ಮಂಗಳವಾರ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಅಲ್ಲಿಗೆ ತೆರಳಿ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ.

"ದೇಶ ಹೋಳಾಗಲು ಬಯಸುವವರ ಜತೆಗೆ ಆಕೆ ನಿಂತರು," ಎಂದು ಚೆನ್ನೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಸ್ಮೃತಿ ಹೇಳಿದ್ದಾರೆ.

"ನೀವು ಎಲ್ಲಿ ಹೋಗಿ ನಿಲ್ಲುತ್ತೀರೆಂದು ಸುದ್ದಿಗಳನ್ನು ಓದುವ ಯಾರಿಗಾದರೂ ತಿಳಿಯುತ್ತದೆ. ಪ್ರತಿ ಬಾರಿ ಒಬ್ಬ ಸಿಆರ್ ಪಿ ಎಫ್ ಜವಾನ ಹತ್ಯೆಗೀಡಾದಾಗ  ಸಂಭ್ರಮಾಚರಿಸುವ ಜನರ ಜತೆ ನೀವು ನಿಲ್ಲುತ್ತೀರೆಂದು ಗೊತ್ತು,'' ಎಂದು ಸ್ಮೃತಿ ಇರಾನಿ ಹೇಳಿದರು.

"ಆಕೆಯ ರಾಜಕೀಯ ನಂಟು ಯಾವುದೆಂದು ತಿಳಿಯದೇ ಇರುವ ಬದಲು ತಿಳಿಯಲು ಬಯಸುತ್ತೇನೆ....ಆಕೆಗೆ ಆ ಹಕ್ಕನ್ನು ನಾನು ನಿರಾಕರಿಸಲು ಸಾಧ್ಯವಿಲ್ಲ, ಸೈದ್ಧಾಂತಿಕವಾಗಿ ಭಿನ್ನ ಹಾಗೂ ಕಣ್ಣಿಗೆ ಕಣ್ಣಿಟ್ಟು ನೋಡದ ವಿದ್ಯಾರ್ಥಿನಿಯರ ಖಾಸಗಿ ಭಾಗಗಳಿಗೆ ಹೊಡೆಯುವವರ ಜತೆ ಆಕೆ ನಿಂತಿದ್ದಾರೆ, ಅದು ಆಕೆಯ ಸ್ವಾತಂತ್ರ್ಯ,'' ಎಂದು ಇರಾನಿ ಹೇಳಿದರು.

"ಆಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆಂದು ಆಕೆ 2011ರಲ್ಲಿಯೇ  ತಿಳಿಯುವಂತೆ ಮಾಡಿದ್ದರು, 'ಭಾರತ್ ತೇರೇ ಟುಕ್ಡೇ ಹೋಂ'ಗೆ ಎಂದು ಹೇಳುವ ಜನರ ಜತೆ ನಿಂತುಕೊಳ್ಳುವುದು ಆಕೆಯ ಹಕ್ಕು,'' ಎಂದೂ ಕೇಂದ್ರ ಸಚಿವೆ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News