×
Ad

ದೀಪಿಕಾಗೆ ಬೆಂಬಲ ಸೂಚಿಸಿ ಪಕ್ಷದ ಕಾರ್ಯಕರ್ತರಿಗೆ 'ಚಪಾಕ್' ವಿಶೇಷ ಪ್ರದರ್ಶನ ಏರ್ಪಡಿಸಿದ ಅಖಿಲೇಶ್ ಯಾದವ್

Update: 2020-01-10 15:23 IST

ಲಕ್ನೋ: ದೀಪಿಕಾ ಪಡುಕೋಣೆ ಅಭಿನಯದ 'ಚಪಾಕ್' ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಇಂದು ಲಕ್ನೋದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಏರ್ಪಡಿಸಿದ್ದಾರೆ.  ಜೆಎನ್ ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಮಂಗಳವಾರ ವಿವಿಗೆ ಭೇಟಿ ನೀಡಿದ ದೀಪಿಕಾ ವಿರುದ್ಧ ಹಲವಾರು ಮಂದಿ ಕಿಡಿಕಾರಿರುವುದನ್ನು ವಿರೋಧಿಸಿ ಹಾಗೂ ಆಕೆಗೆ ಬೆಂಬಲ ಸೂಚಿಸಿ ಅಖಿಲೇಶ್ ಇಂತಹ ಒಂದು ಕ್ರಮ ಕೈಗೊಂಡಿದ್ದಾರೆ.

"`ನಮ್ಮ ನಾಯಕ  ಅಖಿಲೇಶ್ ಯಾದವ್ ಕೂಡ ಆ್ಯಸಿಡ್ ದಾಳಿ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರುವುದರಿಂದ ಈ ಚಿತ್ರದ ಪ್ರದರ್ಶನ ಏರ್ಪಡಿಸಿದ್ದಾರೆ, ಅವರು ಆ್ಯಸಿಡ್ ದಾಳಿ ಸಂತ್ರಸ್ತೆಯರ ಶೀರೋಸ್ ಕೆಫೆ ಲಕ್ನೋದಲ್ಲಿ ಸ್ಥಾಪಿಸಲು ಸಹಾಯ ಮಾಡಿದ್ದರು,'' ಎಂದು  ಸಮಾಜವಾದಿ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News