×
Ad

​ಸಿಎಎ ವಿರೋಧಿಸಿ ಮುಖಪುಟ ಜಾಹೀರಾತು ಪ್ರಕಟಿಸಿದ ಕೇರಳ ಸರಕಾರ

Update: 2020-01-10 15:56 IST

Photo: Twitter(@RohanV)
 

ಹೊಸದಿಲ್ಲಿ : ಕೇಂದ್ರ ಸರಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವ ತನ್ನ ನಿರ್ಧಾರದ ಕುರಿತಾದ ಜಾಹೀರಾತನ್ನು ಕೇರಳ ಸರಕಾರ ಇಂದಿನ ಕನಿಷ್ಠ ಮೂರು ರಾಷ್ಟ್ರೀಯ ದೈನಿಕಗಳಲ್ಲಿ ಪ್ರಕಟಿಸಿದೆ.

'ದಿ ಇಂಡಿಯನ್ ಎಕ್ಸ್ ಪ್ರೆಸ್' ಪತ್ರಿಕೆಯ ದಿಲ್ಲಿ ಆವೃತ್ತಿಯಲ್ಲಿನ ಮುಖಪುಟದಲ್ಲಿ ಈ ಜಾಹೀರಾತು ಪ್ರಕಟಗೊಂಡಿದ್ದರೆ 'ದಿ ಹಿಂದುಸ್ತಾನ್ ಟೈಮ್ಸ್' ಹಾಗೂ 'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲೂ ಪ್ರಕಟಗೊಂಡಿದೆ.

"ವೀ ಆರ್ ಒನ್, ಫಸ್ಟ್'' ಎಂದು ಈ ಜಾಹೀರಾತಿನ ಆರಂಭದಲ್ಲಿ ಬರೆಯಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭಾವಚಿತ್ರವೂ ಜಾಹೀರಾತಿನಲ್ಲಿದೆ. "ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ತಾರತಮ್ಯಕಾರಿ ಸಿಎಎ ವಿರುದ್ಧ ಸರ್ವಾನುಮತದ ನಿರ್ಣಯವನ್ನು ದೇಶದಲ್ಲಿಯೇ ಮೊದಲ ಬಾರಿ ಕೇರಳ ವಿಧಾನಸಭೆ ಅಂಗೀಕರಿಸಿದೆ. ಎನ್‍ಆರ್ ಸಿ ಗೆ ದಾರಿ ಮಾಡಿಕೊಡಬಹುದಾದ ಎನ್‍ಪಿಆರ್ ಪ್ರಕ್ರಿಯೆಗೆ ಕೇರಳ ತಡೆ ಹೇರಿದೆ. ಮಾನವಾಭಿವೃದ್ಧಿ ಸೂಚ್ಯಂಕದಲ್ಲೂ ಕೇರಳ ಮುಂಚೂಣಿಯಲ್ಲಿದೆ, ರಾಜ್ಯವು ಬಡತನ ನಿರ್ಮೂಲನೆ, ಶಿಕ್ಷಣ ಗುಣಮಟ್ಟ, ಲಿಂಗ ಸಮಾನತೆ ಕ್ಷೇತ್ರಗಳಲ್ಲೂ ಮೊದಲ ಸ್ಥಾನದಲ್ಲಿದೆ, ಮುನ್ನಡೆ ಯಾತ್ರೆ ಮುಂದುವರಿಯಲಿದೆ,'' ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News