ಈ.ಡಿ.ಯಿಂದ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಕೊಚ್ಚಾರ್ ಮತ್ತು ಇತರರ 78 ಕೋ.ರೂ.ಆಸ್ತಿ ಜಪ್ತಿ

Update: 2020-01-10 14:01 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.10: ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮಾಜಿ ಆಡಳಿತ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚಾರ್ ಹಾಗೂ ಅವರ ಕುಟುಂಬಕ್ಕೆ ಸೇರಿದ 78 ಕೋ.ರೂ.ವೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಈ.ಡಿ)ವು ಶುಕ್ರವಾರ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಮುಂಬೈನಲ್ಲಿರುವ ಕೊಚ್ಚಾರ್ ಅವರ ಫ್ಲಾಟ್ ಮತ್ತು ಅವರ ಪತಿಯ ಕಂಪನಿಯ ಕೆಲವು ಆಸ್ತಿಗಳು ಇವುಗಳಲ್ಲಿ ಸೇರಿವೆ.

ಐಸಿಐಸಿಐ ಬ್ಯಾಂಕಿನಿಂದ ವಿಡಿಯೋಕೋನ್ ಕಂಪನಿಗೆ 1,875 ಕೋ.ರೂ.ಸಾಲ ಮಂಜೂರಿಯಲ್ಲಿ ಅಕ್ರಮಗಳ ಆರೋಪದಲ್ಲಿ ತನಿಖೆಯನ್ನು ನಡೆಸುತ್ತಿರುವ ಈ.ಡಿ.ಕೊಚ್ಚಾರ್ ದಂಪತಿ,ಧೂತ್ ಸೋದರರು ಮತ್ತು ಇತರರ ವಿರುದ್ಧ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News