×
Ad

ಯುಕ್ರೇನ್ ವಿಮಾನ ಪತನದ ಬಗ್ಗೆ ತನಿಖೆ: ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ನಿರ್ಧಾರ

Update: 2020-01-10 20:54 IST

ನ್ಯೂಯಾರ್ಕ್, ಜ. 10: ಇರಾನ್‌ನಲ್ಲಿ ಪತನಗೊಂಡ ಯುಕ್ರೇನ್ ವಿಮಾನದ ಬಗ್ಗೆ ನಡೆಯುವ ತನಿಖೆಯಲ್ಲಿ ಭಾಗವಹಿಸುವುದಾಗಿ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಗುರುವಾರ ತಿಳಿಸಿದೆ.

ಬುಧವಾರ ಸಂಭವಿಸಿದ ಅಪಘಾತದ ಬಗ್ಗೆ ಇರಾನ್‌ನಿಂದ ತನಗೆ ಅಧಿಕೃತ ಮಾಹಿತಿ ಬಂದಿದೆ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೆಯೊಂದನ್ನು ಹಾಕಿದ ಸಂಸ್ಥೆ ತಿಳಿಸಿದೆ.

ಯುಕ್ರೇನ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ವಿಮಾನವು ಟೆಹರಾನ್ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು ಹಾಗೂ ಅದಾದ ಸ್ವಲ್ಪವೇ ಹೊತ್ತಿನಲ್ಲಿ ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿತು.

‘‘ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಪ್ರತಿನಿಧಿಯೊಬ್ಬರನ್ನು ನಿಯೋಜಿಸಿದೆ’’ ಎಂದು ಸಾರಿಗೆ ಅಪಘಾತಗಳ ಬಗ್ಗೆ ತನಿಖೆ ನಡೆಸುವ ಅಮೆರಿಕದ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News