ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ: ಪ್ರಧಾನಿ ಮೋದಿ

Update: 2020-01-12 07:33 GMT

ಕೋಲ್ಕತಾ, ಜ.12: ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ.  ರಾಜಕೀಯ ಲಾಭಕ್ಕಾಗಿ ಈ ಕಾಯ್ದೆಯ ಬಗ್ಗೆ  ಯುವಕರನ್ನು ದಾರಿ ತಪ್ಪಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಕಾಯ್ದೆ "ಯಾರ ಹಕ್ಕುಗಳನ್ನು ಕಸಿದುಕೊಳ್ಳುವ" ಉದ್ದೇಶ ಹೊಂದಿಲ್ಲ ಎಂದು ಪುನರುಚ್ಚರಿಸಿದರು.

ಸ್ವಾತಂತ್ರ್ಯದ ನಂತರ ಅಲ್ಪಸಂಖ್ಯಾತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಪಾಕಿಸ್ತಾನದ ವಿರುದ್ಧ  ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಮುಸ್ಲಿಂ ವಿರೋಧಿ ಎಂದು ಟೀಕೆಗೊಳಗಾಗಿರುವ  ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧದ ಪ್ರತಿಭಟನೆಗಳು ದೇಶದಾದ್ಯಂತ ನಡೆಯುತ್ತಿದ್ದು ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸಿಎಎ ವಿರುದ್ಧ ಹೋರಾಟದ ನೇತೃತ್ವ ವಹಿಸಿದ್ದಾರೆ.

ಸಿಎಎ ಏಕೆ ಮುಖ್ಯವಾಗಿದೆ ಮತ್ತು ಯುವಕರು ತಿಳಿದುಕೊಳ್ಳಲು ಬಯಸುತ್ತಾರೆ. ಅನೇಕ ವದಂತಿಗಳು ನಡೆಯುತ್ತಿವೆ ಮತ್ತು ನಮ್ಮ ಯುವ ಪೀಳಿಗೆಗೆ ಸುಳ್ಳು ಮತ್ತು ತಪ್ಪು ಕಲ್ಪನೆಗಳನ್ನು ನೀಡಲಾಗುತ್ತಿದೆ. ನಾವು ಅವರಿಗೆ ಸರಿಯಾದ ಮಾಹಿತಿಯೊಂದಿಗೆ ಉತ್ತರಿಸಬೇಕಾಗಿದೆ ಮತ್ತು ಆದ್ದರಿಂದ ನಾನು ಈಶಾನ್ಯ ಮತ್ತು ಬಂಗಾಳದ ಜನರಿಗೆ ಮನವಿ ಮಾಡುತ್ತೇನೆ ನಾವು ಪೌರತ್ವವನ್ನು ನೀಡುತ್ತಿದ್ದೇವೆ ಮತ್ತು ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ  "ಎಂದು ಪ್ರಧಾನಿ ಮೋದಿ ಹೇಳಿದರು.

"ಭಾರತೀಯ ಸಂವಿಧಾನವನ್ನು ಅನುಸರಿಸುವ ಬೇರೆ ದೇಶದಿಂದ ಬರುವ ಯಾರಾದರೂ ನಾಗರಿಕರಾಗಬಹುದು ಎಂದು ನಾವೆಲ್ಲರೂ ತಿಳಿದಿರಬೇಕು. ಸಿಎಎ ಅದರಲ್ಲಿ ಒಂದು ತಿದ್ದುಪಡಿ ಮಾತ್ರ. ನಾವು ಬದಲಾಗಿದ್ದೇವೆ ಮತ್ತು ಇತರ ದೇಶಗಳಲ್ಲಿ  ತೊಂದರೆಗೊಳಗಾದವರಿಗೆ ಪೌರತ್ವ ನೀಡುವ ಅವಕಾಶವನ್ನು ಒದಗಿಸಿದ್ದೇವೆ " ಎಂದುಅವರು ಹೇಳಿದರು.

ಮಹಾತ್ಮ ಗಾಂಧೀಜಿಯವರ ಕನಸುಗಳನ್ನು ಮತ್ತು ಆಶಯಗಳನ್ನು ಸರ್ಕಾರ ಈಡೇರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. .

"ಮಹಾತ್ಮ ಗಾಂಧಿ, ಸರಕಾರ ನಡೆಸಿದ  ಅನೇಕರು ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳಲ್ಲಿ ಚಿತ್ರಹಿಂಸೆಗೊಳಗಾದ ಜನರಿಗೆ ಮಾನವೀಯ ನೆಲೆಯಲ್ಲಿ  ಭಾರತದಲ್ಲಿ ಪೌರತ್ವ ನೀಡಬೇಕು ಎಂದು ಅಭಿಪ್ರಾಪಟ್ಟಿದ್ದರು" ಎಂದು ಪಿಎಂ ಮೋದಿ ಹೇಳಿದರು.

 ರಾಯಲಿಯಲ್ಲಿ ಭಾಗವಹಿದ್ದ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದ  "ನೀವು ಇದನ್ನು ಬಹಳ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಿ. ಆದರೆ ರಾಜಕೀಯ ಆಟಗಳನ್ನು ಆಡುವವರು ಉದ್ದೇಶಪೂರ್ವಕವಾಗಿ ಅರ್ಥಮಾಡಿಕೊಳ್ಳಲು ನಿರಾಕರಿಸುತ್ತಾರೆ. ಪೌರತ್ವ ಕಾಯ್ದೆಯ ಬಗ್ಗೆ ಜನರನ್ನು ದಾರಿ ತಪ್ಪಿಸಲಾಗುತ್ತಿದೆ" ಎಂದು ಪಿಎಂ ಮೋದಿ ಹೇಳಿದರು.

ಬಂಗಾಳಕ್ಕೆ ಎರಡು ದಿನಗಳ  ಭೇಟಿ ನೀಡಿರುವ  ಪಿಎಂ ಮೋದಿ  ರವಿವಾರ ಬೇಲೂರು ಮಠಕ್ಕೆ ಭೇಟಿ ನೀಡಿದರು, ರಾಮಕೃಷ್ಣ ಮಿಷನ್‌ನ ಪ್ರಧಾನ ಕಚೇರಿಯಾಗಿರುವ ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News