ಕೋಲ್ಕತಾ ಬಂದರಿಗೆ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪೋರ್ಟ್ ಟ್ರಸ್ಟ್ ಎಂದು ಮರು ನಾಮಕರಣ ಮಾಡಿದ ಪ್ರಧಾನಿ ಮೋದಿ

Update: 2020-01-12 09:21 GMT

ಕೋಲ್ಕತಾ, ಜ.12: ನೂರ ಐವತ್ತನೇ  ವರ್ಷಾಚರಣೆಯ ಸಂಭ್ರಮದಲ್ಲಿರುವ ಐತಿಹಾಸಿಕ ಕೋಲ್ಕತಾ ಪೋರ್ಟ್ ಟಸ್ಟ್ ಗೆ  ಭಾರತೀಯ ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ  ಪೋರ್ಟ್ ಎಂದು ಮರುನಾಮಕರಣ ಮಾಡುವುದಾಗಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ  ಪ್ರಕಟಿಸಿದರು.

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ  ನಡೆದ ಐತಿಹಾಸಿಕ ಕೋಲ್ಕತಾ ಬಂದರು ಟ್ರಸ್ಟ್ ನ 150ನೇ ವರ್ಷಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅವರು  ಮತ್ತು ಭಾರತೀಯ ಜನ ಸಂಘ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ನಂತರ ಬಂದರಿಗೆ ಮರುನಾಮಕರಣ ಮಾಡಿದರು.

“ಈ ಬಂದರನ್ನು ಮುಂದೆ  ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರಿನಿಂದ ಕರೆಯಲಾಗುತ್ತದೆ. ಶ್ಯಾಮ್ ಪ್ರಸಾದ್ ಮುಖರ್ಜಿ

ಅವರು ಜೀವಂತ ದಂತಕಥೆಯಾಗಿದ್ದು, ಅಭಿವೃದ್ಧಿಯ ನಾಯಕರಾಗಿದ್ದರು ಮತ್ತು ಒನ್ ನೇಷನ್, ಒನ್ ಕಾನ್ಸ್ಟಿಟ್ಯೂಷನ್ ಎಂಬ ಕಲ್ಪನೆಗಾಗಿ ಮುಂಚೂಣಿಯಲ್ಲಿ ಹೋರಾಡಿದರು" ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಶ್ಯಾಮಾ ಪ್ರಸಾದ್ ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು, ನಂತರ ಇದು ಇಂದಿನ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಗಿ ಹೊರಹೊಮ್ಮಿತು.

"ದೇಶದ ಕರಾವಳಿಗಳು ಅಭಿವೃದ್ಧಿಯ ಹೆಬ್ಬಾಗಿಲುಗಳಾಗಿವೆ, ಸಂಪರ್ಕವನ್ನು ಸುಧಾರಿಸಲು ನಮ್ಮ ಸರ್ಕಾರ ಆನೇಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ" ಎಂದು ಪಿಎಂ ಮೋದಿ ಹೇಳಿದರು.

"ಜಲಮಾರ್ಗಗಳ ಅಭಿವೃದ್ಧಿಯು ಪೂರ್ವ ಭಾರತದ ಕೈಗಾರಿಕಾ ಕೇಂದ್ರಗಳೊಂದಿಗೆ ಕೋಲ್ಕತಾ ಪೋರ್ಟ್ ಟ್ರಸ್ಟ್ ನ ಸಂಪರ್ಕವನ್ನು ಸುಧಾರಿಸಿದೆ, ನಮ್ಮ ನೆರೆಯ ರಾಷ್ಟ್ರಗಳಿಗೆ ವ್ಯಾಪಾರವನ್ನು ಸುಲಭಗೊಳಿಸಿದೆ" ಎಂದು ಅವರು ಹೇಳಿದರು.

"ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸರ್ಕಾರಕ್ಕೆ ರಾಜೀನಾಮೆ ನೀಡಿದ ನಂತರ, ಅವರ ಸಲಹೆಗಳನ್ನು ಜಾರಿಗೆ ತರಲಾಗಿಲ್ಲ ಎಂಬುದು ದುರದೃಷ್ಟಕರ" ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News