×
Ad

ಸಿಎಎ ವಿರೋಧಿಸಿ ಕೇರಳದ ಮೀನುಗಾರರಿಂದ ಬೋಟುಗಳಲ್ಲಿ 'ಜಲಯಾತ್ರೆ': ವಿಡಿಯೋ ವೈರಲ್

Update: 2020-01-12 15:34 IST

ತಿರುವನಂತಪುರಂ: ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕೇರಳದ ಮೀನುಗಾರರು  ತಮ್ಮ ಬೋಟುಗಳಲ್ಲಿ ರ್ಯಾಲಿ ನಡೆಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ.

ಮೀನುಗಾರರ `ಜಲ ಯಾತ್ರೆ' ಕೋಯಿಕ್ಕೋಡ್‍ ನ ಚಲಿಯಂ ಪ್ರದೇಶದಲ್ಲಿ ನಡೆದಿದೆ. ಚಲಿಯಂ ಜಂಜರ್ ಜೆಟ್ಟಿಯಿಂದ ಫೊರೋಕ್ ಸೇತುವೆ ತನಕ ತಮ್ಮ ಬೋಟು ಯಾತ್ರೆ ಕೈಗೊಂಡ ಮೀನುಗಾರರು ಸಿಎಎ ವಿರೋಧಿ ಬ್ಯಾನರುಗಳು, ಪೋಸ್ಟರುಗಳನ್ನು ಹಾಗೂ ಭಾರತದ ರಾಷ್ಟ್ರಧ್ವಜವನ್ನೂ ಕೈಗಳಲ್ಲಿ ಹಿಡಿದುಕೊಂಡಿದ್ದರು.

ಮೀನುಗಾರರ ಈ ವಿಶಿಷ್ಟ ಪ್ರತಿಭಟನೆಯ ವೀಡಿಯೋಗಳು ವೈರಲ್ ಆಗಿವೆ.

ಕೇರಳದಲ್ಲಿ 2018ರಲ್ಲಿ ಉಂಟಾದ ಭಾರೀ ಪ್ರವಾಹದ ಸಂದರ್ಭ ರಾಜ್ಯದ ಮೀನುಗಾರರು ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News