ಸಿಎಎ ವಿರೋಧಿ ಪ್ರತಿಭಟನೆ: ಬಂಧಿತರಿಂದ ಎಫ್‌ಐಆರ್ ರದ್ದತಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ

Update: 2020-01-12 14:37 GMT

ಹೊಸದಿಲ್ಲಿ,ಜ.12: ಕಳೆದ ವರ್ಷದ ಡಿ.19ರಂದು ಗುಜರಾತಿನ ಛಾಪಿ ಗ್ರಾಮದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆ ಸಂದರ್ಭ ಬಂಧಿಲಸಲ್ಪಟ್ಟಿದ್ದ ನಾಲ್ವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬಂಧಿತರ ವಿರುದ್ಧ ದಂಗೆ,ಅಕ್ರಮ ಕೂಟ,ಕ್ರಿಮಿನಲ್ ಒಳಸಂಚು,ದರೋಡೆ ಮತ್ತು ಸಮುದಾಯಗಳ ನಡುವೆ ಒಡಕಿಗೆ ಯತ್ನ ಆರೋಪಗಳನ್ನು ಹೊರಿಸಲಾಗಿದೆ.

ಬೆಳಿಗ್ಗೆ 10 ಗಂಟೆಗೆ ದಂಗೆ ಆರಂಭಗೊಂಡಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆದರೆ ಪ್ರತಿಭಟನೆ ಆರಂಭಗೊಳ್ಳುವ ಮೊದಲು ಬೆಳಿಗ್ಗೆ 8:45ಕ್ಕೇ ತಮ್ಮನ್ನು ಪೊಲೀಸರು ವಶಕ್ಕೆ ತೆಗದುಕೊಂಡಿದ್ದರು ಎಂದು ಆರೋಪಿಗಳು ಹೇಳಿದ್ದಾರೆ.

 ಸ್ವಾತಂತ್ರ್ಯ ಹೋರಾಟಗಾರರಾದ ಅಷ್ಫಾಕುಲ್ಲಾ ಖಾನ್ ಮತ್ತು ರಾಮಪ್ರಸಾದ ಬಿಸ್ಮಿಲ್ಲಾ ಅವರ ಪುಣ್ಯತಿಥಿ ಆಚರಣೆಗಾಗಿ ಹಾಗೂ ಸಿಎಎ ವಿರುದ್ಧ ಪ್ರತಿಭಟನೆಗಾಗಿ ಅಧಿಕಾರಿಗಳು ಡಿ.18ರಂದು ತಮಗೆ ಅನುಮತಿಯನ್ನು ನೀಡಿದ್ದರು,ಆದರೆ ಕೊನೆಯ ಘಳಿಗೆಯಲ್ಲಿ ಅದನ್ನು ಹಿಂದೆಗೆದುಕೊಳ್ಳಲಾಗಿತ್ತು ಎಂದೂ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿವರಣೆಯನ್ನು ನೀಡುವಂತೆ ಗುಜರಾತ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News