ಭಾರತ 2019ರಲ್ಲಿ ಶೂಟಿಂಗ್‌ನಲ್ಲಿ ನಂ.1

Update: 2020-01-12 18:20 GMT

 ಹೊಸದಿಲ್ಲಿ, ಜ.12: ಭಾರತ 2019ರಲ್ಲಿ 21 ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚಿನೊಂದಿಗೆ ಭಾರತವು ಎಲ್ಲಾ ರೈಫಲ್-ಪಿಸ್ತೂಲ್ ವಿಶ್ವಕಪ್ ಮತ್ತು ಫೈನಲ್‌ಗಳಲ್ಲಿ ಅಗ್ರಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಶೂಟಿಂಗ್‌ನಲ್ಲಿ ನಂ.1 ದೇಶವಾಗಿ ಹೊರಹೊಮ್ಮಿತ್ತು. ಈ ಬಗ್ಗೆ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಅವರು ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದ್ದಾರೆ ಒಟ್ಟಾರೆ 30 ಪದಕಗಳೊಂದಿಗೆ ಭಾರತವು ಅಗ್ರಸ್ಥಾನದಲ್ಲಿದ್ದರೆ, ಚೀನಾ 11 ಚಿನ್ನ, 15 ಬೆಳ್ಳಿ ಮತ್ತು 18 ಕಂಚುಗಳೊಂದಿಗೆ ಎರಡನೇ ಸ್ಥಾನಗಳನ್ನು ಗಳಿಸಿದೆ. ಅಮೆರಿಕ 15 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ (ಆರು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚು).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News