ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿ

Update: 2020-01-12 18:29 GMT

ಮುಂಬೈ, ಜ.12: ಫೆಬ್ರವರಿ 21 ರಿಂದ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಮಹಿಳಾ ಟ್ವೆಂಟಿ-20 ವಿಶ್ವಕಪ್‌ಗಾಗಿ ಹದಿನೈದು ಮಂದಿ ಆಟಗಾರ್ತಿಯರ ಭಾರತ ಕ್ರಿಕೆಟ್ ತಂಡವನ್ನು (ಬಿಸಿಸಿಐ) ರವಿವಾರ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ನಾಯಕಿಯಾಗಿ ಮುನ್ನಡೆಸುವರು. ಭಾರತ ತಂಡದಲ್ಲಿ ಬಂಗಾಳದ ರೂಕಿ ಬ್ಯಾಟ್ಸ್‌ವುಮನ್ ರಿಚಾ ಘೋಷ್ ಮಾತ್ರ ಹೊಸ ಮುಖ.

ಇದೇ ವೇಳೆ 2 ವಿಶ್ವಕಪ್‌ಗೆ ಮುಂಚಿತವಾಗಿ ಆಸ್ಟ್ರೇಲಿಯದಲ್ಲಿ ತ್ರಿ-ಸರಣಿಗಾಗಿ 16 ಸದಸ್ಯರ ತಂಡವನ್ನು ಆಯ್ಕೆ ಸಮಿತಿಯು ಘೋಷಿಸಿದೆ.

ಹರ್ಯಾಣದ ಶಾಲಾ ವಿದ್ಯಾರ್ಥಿನಿ ಶಫಾಲಿ ವರ್ಮಾ ಕೂಡ ತನ್ನ ಮೊದಲ ಟ್ವೆಂಟಿ-20ನಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕೆಲವು ಉತ್ತಮ ಪ್ರದರ್ಶನ ನೀಡಿದ ನಂತರ ತನ್ನ ಮೊದಲ ಜಾಗತಿಕ ಟೂರ್ನಿಯಲ್ಲಿ ಆಡಲು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚಿನ ಮಹಿಳಾ ಚಾಲೆಂಜರ್ ಟ್ರೋಫಿಯಲ್ಲಿ ನೀಡಿದ ಪ್ರದರ್ಶನದ ಹಿನ್ನೆಲೆಯಲ್ಲಿ ರಿಚಾಗೆ ಅವಕಾಶ ನೀಡಲಾಗಿದೆ.ಅವರು ಒಂದು ಪಂದ್ಯದಲ್ಲಿ 26 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 36 ರನ್ ಗಳಿಸಿದ್ದರು.

 ಟ್ವೆಂಟಿ-20 ವಿಶ್ವಕಪ್‌ಗೆ ಮುಂಚಿತವಾಗಿ ಆಸ್ಟ್ರೇಲಿಯದಲ್ಲಿ ತ್ರಿಕೋನ ಸರಣಿಗಾಗಿ 16 ಸದಸ್ಯರ ತಂಡವನ್ನು ಆಯ್ಕೆದಾರರು ಘೋಷಿಸಿದ್ದು, ನುಝ್ರತ್ ಪರ್ವೀನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತ್ರಿಕೋನ ಟೂರ್ನಿ ಜನವರಿ 31 ರಂದು ಪ್ರಾರಂಭವಾಗುತ್ತದೆ. ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆೆ. ಐಸಿಸಿ ವಿಶ್ವಕಪ್ ಟ್ವೆಂಟಿ-20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಝ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ

<    ತ್ರಿಕೋನ ಸರಣಿಗೆ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಝ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ನುಝ್ರತ್‌ಪರ್ವೀನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News