ಬ್ಲಡ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರ

Update: 2020-01-13 06:35 GMT

ಕಾಸರಗೋಡು: ಕುನ್ನಿಲ್ ಯಂಗ್ ಚಾಲೆಂಜರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮತ್ತು ಜನರಕ್ಷ ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ಕಾಸರಗೋಡಿನಲ್ಲಿ ರಕ್ತದಾನ ಶಿಬಿರ ನಡೆಯಿತು. 

ಕಾಸರಗೋಡು: ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಕುನ್ನಿಲ್ ಯಂಗ್ ಚಾಲೆಂಜರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮತ್ತು ಜನರಕ್ಷ ಬ್ಲಡ್ ಡೋನರ್ಸ್ ಕಾಸರಗೋಡು ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನ ಕುನ್ನಿಲ್ ನಲ್ಲಿರುವ ಸಿರಾಜುಲ್ ಉಲೂಮ್ ಮದ್ರಸ ವಠಾರದಲ್ಲಿ ನಡೆಯಿತು. 

ಕುನ್ನಿಲ್ ಯಂಗ್ ಚಾಲೆಂಜರ್ಸ್ ಇದರ ಅಧ್ಯಕ್ಷ ರಿಯಾಝ್ ಕುನ್ನಿಲ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಚೇರ್ಮನ್ ಶಾನವಾಸ್ ಪಾದೂರ್ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಹ್ಯೂಮನ್ ರೈಟ್ಸ್ ಯೂತ್ ವಿಂಗ್ ರಾಜ್ಯ ಉಪಾಧ್ಯಕ್ಷ ನಾಸರ್ ಚೆರ್ಕಳ ಹಾಗೂ ಜನ ಮೈತ್ರಿ ಕಾಸರಗೋಡು ಇದರ ಮಧು ಆಗಮಿಸಿದ್ದರು.

ವೇದಿಕೆಯಲ್ಲಿ ಬಾವ ಹಾಜಿ ಕತಾರ್, ಮಾಹಿನ್ ಕುನ್ನಿಲ್, ಆಬಿದ್ ನುನು, ಹುಸೈನ್ ಕೊಕ್ಕಡಮ್, ಜಾಫರ್ ಕುನ್ನಿಲ್, ಲತೀಫ್ ಕುನ್ನಿಲ್, ಇಕೆ ಸಿದ್ದೀಕ್, ನೌಫಲ್ ಕುನ್ನಿಲ್, ಇರ್ಫಾನ್ ಕುನ್ನಿಲ್, ಶರತ್ ಕುಮಾರ್, ಬಿಲಾಲ್ ಕುನ್ನಿಲ್, ಇಕ್ಬಾಲ್ ಮೇನತ್, ಜಾಬಿರ್ ಕುನ್ನಿಲ್, ಜನರಕ್ಷ ಬ್ಲಡ್ ಡೋನರ್ಸ್ ಚೇರ್ಮನ್ ನಾಸರ್ ಬಾಯಾರ್, ಸದಸ್ಯರಾದ ಇಬ್ರಾಹಿಂ ಪೆರ್ವಾಡ್, ಮುಹಮ್ಮದ್ ಸ್ಮಾರ್ಟ್, ಬಷೀರ್ ಕುಂಬ್ಳೆ, ಆಬಿದ್ ಬಂದ್ಯೋಡು, ಮೂಸಾ ಚೌಕಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕ ಇಫಾಝ್ ಬನ್ನೂರು, ಮನ್ಸೂರು ಉಳಾಯಿಬೆಟ್ಟು ಮತ್ತು ರಝ್ವೀನ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 45 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಕುನ್ನಿಲ್ ಯಂಗ್ ಚಾಲೆಂಜರ್ಸ್ ಇದರ ಪ್ರಧಾನ ಕಾರ್ಯದರ್ಶಿ ಡಾ.ಕೆ ಎಂ ಸಫ್ವಾನ್ ಕುನ್ನಿಲ್ ಸ್ವಾಗತ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News