ಮಲೇಶ್ಯ ಮಾಸ್ಟರ್ಸ್ ಜಯಿಸಿದ ಮೊಮೊಟಾ

Update: 2020-01-13 17:27 GMT

ಕೌಲಾಲಂಪುರ, ಜ.13: ಮಲೇಶ್ಯ ಮಾಸ್ಟರ್ಸ್ ಟ್ರೋಫಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾ ಅವರು ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್‌ರನ್ನು ಸುಲಭವಾಗಿ ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೊಮೊಟಾ ಅವರು 24-22, 21-11 ಅಂತರದಲ್ಲಿ ಡೆನ್ಮಾರ್ಕ್‌ನ ಆಕ್ಸೆಲ್ಸನ್‌ರನ್ನು ಮಣಿಸಿದರು.

  ಮಲೇಶ್ಯ ಮಾಸ್ಟರ್ಸ್‌ನಲ್ಲಿ ಗೆಲುವು ಮೊಮೊಟಾಗೆ ಜುಲೈನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ತಯಾರಿಗೆ ಇನ್ನಷ್ಟು ಒತ್ತು ನೀಡದಂತಾಗಿದೆ. 2020 ರಲ್ಲಿ ಮೊದಲ ಪ್ರಶಸ್ತಿಯನ್ನು ಮೊಮೊಟಾ ಜಯಿಸಿದ್ದಾರೆ. ಇದೀಗ ಅವರು ವಿಶ್ವದ ಅತ್ಯುತ್ತಮ ಆಟಗಾರ, ಕಳೆದ ವರ್ಷ ದಾಖಲೆಯ 11 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News