ತುಂಬೆ: ಬಿಐಟಿ ಮತ್ತು ಬೀಡ್ಸ್ ವತಿಯಿಂದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಾಗಾರ

Update: 2020-01-14 04:29 GMT

ಬಂಟ್ವಾಳ, ಜ.14: ಬಿಐಟಿ ಮತ್ತು ಬೀಡ್ಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸಿಇಟಿ ಅಣಕು ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಾಗಾರವು ತುಂಬೆ ಬಿಎ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಸಿಇಟಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸವಿವರವಾಗಿ ವಿವರಿಸಲಾಯಿತು ನಂತರ ಸಿಇಟಿ ಅಣಕು ಪರೀಕ್ಷೆಯನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಬಿಐಟಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಮುಸ್ತಫಾ ಖಲೀಲ್, ಪ್ರೊ.ಅಬೂಬಕರ್ ಶಮೀಝ್, ಪ್ರೊ.ಇಮ್ರಾನ್ ಅಹ್ಮದ್ ಹಾಗೂ ಸಫ್ವಾನ್ ಕರ್ವೆಲ್ ನಡೆಸಿಕೊಟ್ಟರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News