ಆಶಾ ಕಾರ್ಯಕರ್ತೆಯರಿಂದ ಆಕ್ಷೇಪಾರ್ಹ ಹೇಳಿಕೆ: ಆರೋಗ್ಯ ಸಹಾಯಕಿಯರಿಂದ ಡಿಎಚ್‌ಓಗೆ ಮನವಿ

Update: 2020-01-14 14:50 GMT

ಉಡುಪಿ, ಜ.14: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮುಷ್ಕರದ ಸಂದರ್ಭ ದಲ್ಲಿ ಆಶಾ ಕಾರ್ಯಕರ್ತೆಯರು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಖಂಡಿಸಿ ಮತ್ತು ಕೂಡಲೇ ಕ್ಷಮೆಯಾಚನೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಸಹಾ ಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘ ಉಡುಪಿ ಜಿಲ್ಲಾ ಶಾಖೆಯ ವತಿ ಯಿಂದ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ಅವರಿಗೆ ಮನವಿ ಸಲ್ಲಿಸಾಯಿತು.

ಆಶಾ ಕಾರ್ಯಕರ್ತೆಯರು ಸರಕಾರ ಹಾಗೂ ಜನಸಾಮಾನ್ಯರ ಅನುಕಂಪ ಪಡೆದುಕೊಳ್ಳಲು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಸುಳ್ಳು ಮಾಹಿತಿ ಗಳನ್ನು ನೀಡಿದ್ದಾರೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಅಸಹಕಾರ ಧೋರಣೆಯಿಂದ ನಮಗೆ ಕಾಲಕಾಲಕ್ಕೆ ಗೌರವಧನ ಬರುತ್ತಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಕಿರಿಯ ಮಹಿಳಾ ಆರೋಗ್ಯ ಸಹಾಯ ಕಿಯರಿಗೆ ಮಾಡಿರುವ ದ್ರೋಹ ಆಗಿದೆ ಮತ್ತು ಆರೋಗ್ಯ ಸಹಾಯಕಿಯರಿಗೆ ನೋವು ಉಂಟು ಮಾಡಿರುವ ಈ ಹೇಳಿಕೆಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಉಡುಪಿ ಶಾಖೆ ಅಧ್ಯಕ್ಷ ನಿತ್ಯಾನಂದ ಗೌಡ, ಕುಂದಾಪುರ ಅಧ್ಯಕ್ಷ ರಮೇಶ್ ಶೆಟ್ಟಿ, ಕಾರ್ಕಳ ಅಧ್ಯಕ್ಷ ಶಿವರಾಮ ಭಟ್, ಪ್ರಮುಖ ಪದಾಧಿಕಾರಿಗಳಾದ ಬಸವರಾಜ್, ಗ್ರೇಸಿ ಎಂ.ವಿ. ಕುಂದಾಪುರ, ಜಯಲಕ್ಷ್ಮೀ, ಸುಶೀಲಾ, ಚೆಲ್ಲು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News