ಕುತ್ಪಾಡಿ ಎಸ್‌ಡಿಎಂ ಕಾಲೇಜಿನಲ್ಲಿ ರಕ್ತದಾನ ಶಿಬಿರ

Update: 2020-01-14 14:55 GMT

ಉಡುಪಿ, ಜ.14: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ಆಶ್ರಯದಲ್ಲಿ ರೆಡ್‌ಕ್ರಾಸ್ ಘಟಕ, ಎನ್ನೆಸ್ಸೆಸ್ ಘಟಕ ಹಾಗೂ ಉಡುಪಿ ರಕ್ತನಿಧಿ ಘಟಕದ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ಜರಗಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಉಡುಪಿ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ.ವೀಣಾ ರಕ್ತದಾನದ ಮಹತ್ವವನ್ನು ವಿವರಿಸಿದರು. ಡಾ.ಯೋಗೀಶ್ ಆಚಾರ್ಯ ಹಾಗೂ ಡಾ.ಸಂದೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

 ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಡಾ. ಮೊಹಮ್ಮದ್ ಫೈಸಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೇವಾಯೋಜನಾಧಿ ಕಾರಿ ಡಾ.ವಿದ್ಯಾಲಕ್ಷ್ಮೀ ಕೆ. ಸ್ವಾಗತಿಸಿದರು. ರೆಡ್‌ಕ್ರಾಸ್ ಸದಸ್ಯ ಡಾ.ತೇಜಸ್ವಿ ಐ.ನಾಯ್ಕಿ, ಡಾ.ಸುಶ್ಮಿತಾ ವಿ.ಎಸ್. ಸಹಕರಿಸಿದರು. ಸ್ವಯಂಸೇವಕಿ ಶ್ರಾವ್ಯ ವಂದಿಸಿದರು. ಸುಷ್ಮ ಪೈ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸುಮಾರು 161 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News