ಉಡುಪಿ: ಜಿಲ್ಲೆಯಲ್ಲಿ ಮಿಂಚಿನ ನೊಂದಣಿಯಲ್ಲಿ 6918 ಅರ್ಜಿ ಸಲ್ಲಿಕೆ

Update: 2020-01-14 14:57 GMT

ಉಡುಪಿ, ಜ.14: ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಕುರಿತಂತೆ ಜಿಲ್ಲೆಯಲ್ಲಿ ಇದೇ ಜ.6ರಿಂದ 10ರವರೆಗೆ ನಡೆದ ಮಿಂಚಿನ ನೊಂದಣಿ ಕಾರ್ಯಕ್ರಮದಲ್ಲಿ ಒಟ್ಟು 6918 ಮತದಾರರು ಅರ್ಜಿ ಸಲ್ಲಿಸಿದ್ದಾರೆ.

118. ಬೈಂದೂರು ಕ್ಷೇತ್ರದ 246 ಮತಗಟ್ಟೆಗಳಲ್ಲಿ 889 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 388 ಮಂದಿ ರದ್ದು ಗೊಳಿಸಲು, 311 ಮಂದಿ ತಿದ್ದುಪಡಿಗೆ ಹಾಗೂ 12 ಮಂದಿ ವಿಧಾನಸಬಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಬೈಂದೂರು ಕ್ಷೇತ್ರದಲ್ಲಿ ಒಟ್ಟು 1600 ಅರ್ಜಿಗಳ ಸಲ್ಲಿಕೆಯಾಗಿವೆ.

119. ಕುಂದಾಪುರ ಕ್ಷೇತ್ರದ 222 ಮತಗಟ್ಟೆಗಳಲ್ಲಿ 893 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 85 ಮಂದಿ ರದ್ದುಗೊಳಿಸಲು, 69 ಮಂದಿ ತಿದ್ದುಪಡಿಗೆ ಹಾಗೂ 28 ಮಂದಿ ವಿಧಾನಸಬಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 1075 ಅರ್ಜಿ ಸಲ್ಲಿಕೆಯಾದಂತಾಗಿದೆ.

120. ಉಡುಪಿ ಕ್ಷೇತ್ರದ 226 ಮತಗಟ್ಟೆಗಳಲ್ಲಿ 959 ಮಂದಿ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 631 ಮಂದಿ ಹೆಸರು ರದ್ದು ಪಡಿಸಲು, 430 ಮಂದಿ ತಿದ್ದುಪಡಿಗೆ ಹಾಗೂ 68 ಮಂದಿ ವಿಧಾನಸಬಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಉಡುಪಿ ಕ್ಷೇತ್ರದಲ್ಲಿ ಒಟ್ಟು 2088 ಅರ್ಜಿಗಳ ಸಲ್ಲಿಕೆಯಾಗಿವೆ.

121. ಕಾಪು ಕ್ಷೇತ್ರದ 208 ಮತಗಟ್ಟೆಗಳಲ್ಲಿ 594 ಮಂದಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 299 ಮಂದಿ ರದ್ದುಗೊಳಿಸಲು, 224 ಮಂದಿ ತಿದ್ದುಪಡಿಗೆ ಹಾಗೂ 10 ಮಂದಿ ವಿಧಾನಸಬಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಕಾಪು ಕ್ಷೇತ್ರದಲ್ಲಿ ಒಟ್ಟು 1127 ಅರ್ಜಿಗಳ ಸಲ್ಲಿಕೆಯಾಗಿವೆ.

122. ಕಾರ್ಕಳ ಕ್ಷೇತ್ರದ 209 ಮತಗಟ್ಟೆಗಳಲ್ಲಿ 719 ಮಂದಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 90 ಮಂದಿ ರದ್ದುಗೊಳಿಸಲು, 157 ಮಂದಿ ತಿದ್ದುಪಡಿಗೆ ಹಾಗೂ 62 ಮಂದಿ ವಿಧಾನಸಬಾ ಕ್ಷೇತ್ರ ಬದಲಾವಣೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕಾರ್ಕಳ ಕ್ಷೇತ್ರದಲ್ಲಿ ಒಟ್ಟು 1028 ಅರ್ಜಿ ಸಲ್ಲಿಕೆಯಾಗಿವೆ.

ಮಿಂಚಿನ ನೊಂದಣಿ ಅವಧಿಯಲ್ಲಿ ಜಿಲ್ಲೆಯ ಒಟ್ಟು 1111 ಮತಗಟ್ಟೆಗಳ ವ್ಯಾಪ್ತಿಯಲ್ಲಿ 4054 ಮಂದಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, 1493 ಮಂದಿ ಹೆಸರು ರದ್ದುಗೊಳಿಸಲು, 1191 ಮಂದಿ ತಿದ್ದುಪಡಿಗೆ ಹಾಗೂ 180 ಮಂದಿ ವಿಧಾನಸಬಾ ಕ್ಷೇತ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 6918 ಅರ್ಜಿಗಳು ಸಲ್ಲಿಕೆಯಾಗಿವೆ.

ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಪ್ರಸ್ತುತ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲು ಜ.27 ಕೊನೆಯ ದಿನಾಂಕವಾಗಿದೆ. ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಫೆ.7ರಂದು ಪ್ರಕಟಿಸಲಾಗುವುದು. ಜನವರಿ 25ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನದಂದು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಕೆಲವು ಮಂದಿಗೆ ಸಾಂಕೇತಿಕವಾಗಿ ಹೊಸ ಮತದಾರರ ಚೀಟಿಯನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News