ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಅಮರ್ ಬೀರೆರ್ ಕೋಟಿ-ಚೆನ್ನಯೆರ್’ ಹೆಸರಿಡಲು ಸಿಪಿಐ ಆಗ್ರಹ

Update: 2020-01-14 15:08 GMT

ಮಂಗಳೂರು, ಜ.14: ಕರ್ನಾಟಕ ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಲು ಮೂಲ ಸೌಕರ್ಯ ಇಲಾಖೆ ಜಿಲ್ಲಾಡಳಿತದಿಂದ ವರದಿ ಕೇಳಿದೆ. ಇದರಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ. ಈ ವಿಮಾನ ನಿಲ್ದಾಣಕ್ಕೆ ‘ಅಮರ್ ಬೀರೆರ್ ಕೋಟಿ-ಚೆನ್ನಯೆರ್’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕೆಂದು ಸಿಇಐ ಮಂಗಳೂರು ತಾಲೂಕು ಸಮಿತಿ ಆಗ್ರಹಿಸಿದೆ.

ಕೋಟಿ ಚೆನ್ನಯರು ತುಳುವರ ವೀರ ಪುರುಷರಾಗಿದ್ದಾರೆ. ನಾಡಿನಲ್ಲಿ ಅಧರ್ಮ ಮೇಳೈಸಿದಾಗ ತಪ್ಪಿತಸ್ಥರ ವಿರುದ್ಧ ಸೆಟೆದು ನಿಂತು ಧರ್ಮವನ್ನು ನೆಲೆ ನಿಲ್ಲಿಸಿದವರು. ಆ ಮೂಲಕ ಸಮಾಜಕ್ಕೆ ಸತ್ಯವನ್ನು ತಿಳಿಸಿದವರು. ಹಾಗಾಗಿ ಈ ವೀರ ಪುರುಷರ ಹೆಸರು ಜಗತ್ತಿನಾದ್ಯಂತ ಮೇಳೈಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಅಮರ್ ಬೀರೆರ್ ಕೊಟಿ ಚೆನ್ನಯೆರ್’ ಎಂದು ಹೆಸರಿಡಬೇಕು ಎಂದು ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ವಿ.ಎಸ್. ಬೇರಿಂಜ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News