​ವಕ್ಫ್ ಸಂಸ್ಥೆಗಳು ಸಮಿತಿ ರಚಿಸಿ ಪ್ರಸ್ತಾವನೆ ಸಲ್ಲಿಸಲು ಸೂಚನೆ

Update: 2020-01-14 15:36 GMT

ಉಡುಪಿ, ಜ.14: ಉಡುಪಿ ಜಿಲ್ಲೆಯ ವಕ್ಫ್ ಸಂಸ್ಥೆಗಳಿಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಬೈಲಾ ಅನುಮೋದನೆ ಗೊಂಡಿದ್ದು, ವಕ್ಫ್ ಸಂಸ್ಥೆಗಳು ಕಾಲಕಾಲಕ್ಕೆ ಮೂರು ವರ್ಷಗಳ ಆಡಳಿತ ಸಮಿತಿಯನ್ನು ರಚನೆ ಮಾಡಿ ಪ್ರಸ್ತಾವನೆಯನ್ನು ವಾರ್ಷಿಕ ಲೆಕ್ಕ ಪತ್ರಗಳನ್ನು ನಿಗದಿತ ನಮೂನೆಯೊಂದಿಗೆ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.

ಕೆಲವು ವಕ್ಫ್ ಸಂಸ್ಥೆಗಳಿಗೆ ಸರಕಾರದಿಂದ ದುರಸ್ಥಿ ಕಾಮಗಾರಿಗೆ ಹಾಗೂ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸಂಸ್ಥೆಗಳು ಕಾಮಗಾರಿ ಪೂರ್ಣಗೊಳಿಸಿ ಅನುದಾನ ಬಿಡುಗಡೆಯಾದ ಆರು ತಿಂಗಳಲ್ಲಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ಜಿಲ್ಲೆಯಲ್ಲಿ ವಕ್ಫ್‌ಗೆ ನೋಂದಣಿಯಾಗದೆ ಇರುವ ಸಂಸ್ಥೆಗಳು ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಅದೇ ರೀತಿ ವಕ್ಫ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಇಮಾಮ್ ಮತ್ತು ಮುಅದ್ದೀನ್‌ರವರು ಹಾಜರಾತಿ ಪತ್ರ ವನ್ನು ಸಮಿತಿಯಿಂದ ದೃಢೀಕರಿಸಿ ಪ್ರತಿ ತಿಂಗಳ 25ರೊಳಗೆ ಸಲ್ಲಿಸಬೇಕು. ಅಲ್ಲದೆ ಕರ್ನಾಟಕ ಸರಕಾರದ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂಬ ಸೌಲಭ್ಯ ಹಾಗೂ ಐಡಿ ಕಾರ್ಡ್ ಪಡೆದು ಅದರ ಪ್ರತಿಯನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News