ಆದಾಯ ತೆರಿಗೆ ಪ್ರಮಾಣಪತ್ರದ ಹೆಸರಿನಲ್ಲಿ ವಂಚನೆ: ದೂರು

Update: 2020-01-14 15:40 GMT

ಗಂಗೊಳ್ಳಿ, ಜ.14: ಆದಾಯ ತೆರಿಗೆ ಇಲಾಖೆಯಿಂದ 35 ಎಸಿ ಪ್ರಮಾಣ ಪತ್ರ ಮಾಡಿಸುವುದಾಗಿ ಹೇಳಿ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಯಕ್ಷಶ್ರೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ನಾಡ ಗ್ರಾಮದ ಪಡುಕೋಣೆಯ ರಾಜೇಶ್ ಹೆಬ್ಬಾರ್ ಆದಾಯ ತೆರಿಗೆ ಇಲಾಖೆಯಿಂದ ಟ್ರಸ್ಟ್‌ನ 35ಎಸಿ ಪ್ರಮಾಣಪತ್ರ ಮಾಡಿಸಲು ಮುಂದಾಗಿದ್ದು, ಆ ವೇಳೆ ಮುನಿ ಚಂದ್ರ ಡಿ.ವಿ. ಎಂಬವರು ತಾನು ಆದಾಯ ತೆರಿಗೆ ವೃತ್ತಿ ಮಾಡುತ್ತಿರುವುದಾಗಿ ಹೇಳಿ, ಪ್ರಮಾಣಪತ್ರಕ್ಕಾಗಿ ಸರಕಾರಕ್ಕೆ 3,50,000ರೂ. ಶುಲ್ಕ ಪಾವತಿಸಬೇಕು ಎಂದು ಹೇಳಿದ್ದರೆನ್ನಲಾಗಿದೆ.

ಅದರಂತೆ ಬೆಂಗಳೂರಿನ ದೇವನಹಳ್ಳಿ ಶಾಖೆಯ ಖಾತೆಗೆ ರಾಜೇಶ್ ಹೆಬ್ಬಾರ್ 2018ರ ಸೆ.25ರಂದು ವಿಜಯ ಬ್ಯಾಂಕ್ ಕುಂದಾಪುರ ಶಾಖೆಯ ಮೂಲಕ 3,50,000ರೂ. ವರ್ಗಾವಣೆ ಮಾಡಿದ್ದಾರೆ. ಆದರೆ ಮುನಿಚಂದ್ರ ಈವರೆಗೆ ಪ್ರಮಾಣಪತ್ರ ಮಾಡಿಕೊಡದೆ ವಂಚನೆ ಮಾಡಿರುವುದಾಗಿ ದೂರ ಲಾಗಿದೆ. ಅಲ್ಲದೆ 2019 ಅ.10ರಂದು ಕರೆ ಮಾಡಿದ ರಾಜೇಶ್ ಹೆಬ್ಬಾರ್‌ಗೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News