ಆಸ್ಟ್ರೇಲಿಯ ವಿರುದ್ಧ ಧವನ್ 1,000 ರನ್
ಮುಂಬೈ, ಜ.14: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಮಂಗಳವಾರ ವಿಶೇಷ ಸಾಧನೆ ಮಾಡಿದ್ದು, ಆಸ್ಟ್ರೇಲಿಯ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್ ಗಳಿಸಿದ ಭಾರತದ 5 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಈ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಏಕದಿನ ಪಂದ್ಯಗಳಲ್ಲಿ 1,000 ರನ್ ಗಳಿಸಿದ ವಿಶ್ವದ 32 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್ ಮನ್ ಧವನ್ ಪಾತ್ರರಾದರು. ಭಾರತದ ಸಚಿನ್ ತೆಂಡುಲ್ಕರ್ (3,077 ರನ್), ಮಹೇಂದ್ರ ಸಿಂಗ್ ಧೋನಿ (1,660), ವಿರಾಟ್ ಕೊಹ್ಲಿ (1,727) ಮತ್ತು ರೋಹಿತ್ ಶರ್ಮಾ (2,047) ಈ ಸಾಧನೆ ಮಾಡಿದ್ದಾರೆ.
34 ವರ್ಷದ ಧವನ್ ಆಸ್ಟ್ರೇಲಿಯ ವಿರುದ್ಧ 25ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಧವನ್ ಇದುವರೆಗೆ ಆಸ್ಟ್ರೇಲಿಯ ವಿರುದ್ಧ 4 ಶತಕಗಳನ್ನು ಗಳಿಸಿದ್ದಾರೆ.
ಸೆತಗಳಲ್ಲಿ 28ನೇ ಅರ್ಧಶತಕವನ್ನು ಪೂರೈಸಿದರು. ಈ ಪಂದ್ಯಕ್ಕಿಂತ ಮೊದಲು ಧವನ್ 133 ಏಕದಿನ ಪಂದ್ಯಗಳಲ್ಲಿ ಒಟ್ಟು 17 ಶತಕಗಳು ಮತ್ತು 27 ಅರ್ಧಶತಕಗಳನ್ನು ಒಳಗೊಂಡಂತೆ ಒಟ್ಟು 5,518 ರನ್ ಗಳಿಸಿದ್ದರು.