ಮಧ್ಯಪ್ರದೇಶ: 13 ಗಂಟೆ ಅವಧಿಯಲ್ಲಿ ಬುಡಕಟ್ಟು ಜನಾಂಗದ ಆರು ಶಿಶುಗಳು ಮೃತ್ಯು

Update: 2020-01-15 03:51 GMT

ಭೋಪಾಲ್ : ಮಧ್ಯಪ್ರದೇಶದ ಶಹಾದೋಲ್ ಜಿಲ್ಲೆಯಲ್ಲಿ ಕೇವಲ 13 ಗಂಟೆ ಅವಧಿಯಲ್ಲಿ ಬುಡಕಟ್ಟು ಜನಾಂಗದ ಆರು ಶಿಶುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗೆ ಈ ಸಾವು ಸಂಭವಿಸಿದ್ದು, ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

ಆದರೆ ಎಲ್ಲ ಮಕ್ಕಳೂ ಗಂಭೀರ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗೂ ಇತರ ಆಸ್ಪತ್ರೆಗಳಿಂದ ಗಂಭೀರ ಸಮಸ್ಯೆ ಕಾರಣದಿಂದಾಗಿ ಕರೆ ತರಲಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ವೈದ್ಯಕೀಯ ಸಿಬ್ಬಂದಿಯಿಂದ ಯಾವ ಲೋಪವೂ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಆರೋಗ್ಯ ಸಚಿವ ತುಳಸಿ ಸಿಲಾವತ್ ಆದೇಶಿಸಿದ್ದಾರೆ.

ಎರಡು ಶಿಶುಗಳನ್ನು ಸುಮಾರು 15 ದಿನಗಳ ಹಿಂದೆ ದಾಖಲಿಸಲಾಗಿತ್ತು. ಇಬ್ಬರು ಜನರಲ್ ವಾರ್ಡ್‌ನಲ್ಲಿದ್ದರು. ಉಳಿದ ಇಬ್ಬರು ನವಜಾತ ಶಿಶುಗಳ ವಿಶೇಷ ನಿಗಾ ಘಟಕದಲ್ಲಿ ಮತ್ತು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದ್ದರು ಎಂದು ಮೂಲಗಳು ಹೇಳಿವೆ. ಮೃತಪಟ್ಟ ಎಲ್ಲ ಶಿಶುಗಳು ಆರು ತಿಂಗಳಿಗಿಂತ ಕಡಿಮೆಯವರು.

ಮೂರು ಶಿಶುಗಳು ಸಂಜೆ 6.50ರಿಂದ 7.30ರ ಅವಧಿಯಲ್ಲಿ ಮೃತಪಟ್ಟಿವೆ. ನಾಲ್ಕನೇ ಮಗು ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದು, ಆರು ಗಂಟೆಗೆ ಇನ್ನೊಂದು ಮಗು ಹಾಗೂ 7.50ಕ್ಕೆ ಮತ್ತೊಂದು ಮಗು ಮೃತಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News