ಜೆಎನ್ ಯು ಹಿಂಸಾಚಾರ: ಕೋಲು ಹಿಡಿದುಕೊಂಡ ಮುಸುಕುಧಾರಿ ಮಹಿಳೆ ತಮ್ಮ ಸದಸ್ಯೆ ಎಂದು ಒಪ್ಪಿಕೊಂಡ ಎಬಿವಿಪಿ

Update: 2020-01-15 04:58 GMT

ಹೊಸದಿಲ್ಲಿ, ಜ.15: ಜನವರಿ 5 ರಂದು ದೆಹಲಿಯ ಜವಾಹರ್ ಲಾಲ್ ವಿವಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಕೈಯಲ್ಲಿ ಕೋಲು ಹಿಡಿದುಕೊಂಡು ಕಂಡು ಬಂದಿದ್ದ ಮುಸುಕುಧಾರಿ ಮಹಿಳೆ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕೋಮಲ್ ಶರ್ಮಾ ಎಂದು ದೆಹಲಿ ಪೊಲೀಸರು ಗುರುತಿಸಿದ್ದಾರೆ. ದೆಹಲಿಯ ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ಈಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸದಸ್ಯೆಯಾಗಿದ್ದಾಳೆ.

ಎಬಿವಿಪಿ ದೆಹಲಿ ರಾಜ್ಯ ಕಾರ್ಯದರ್ಶಿ ಸಿದ್ದಾರ್ಥ್ ಯಾದವ್ ಆಕೆ ಎಬಿವಿಪಿ ಸದಸ್ಯೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಆಕೆಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಆರಂಭವಾದ ಮೇಲೆ ಆಕೆ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಆಕೆ ತನ್ನ ಕುಟುಂಬದ ಜತೆಗೆ ಇದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಎಂದು ಸಿದ್ದಾರ್ಥ್ ಹೇಳಿದ್ದಾರೆ.

ಜ.5 ರಂದು ಚೌಕುಳಿ ಅಂಗಿ ಹಾಗು ನೀಲಿ ಬಣ್ಣದ ಸ್ಕಾರ್ಪ್ ಧರಿಸಿದ್ದ ಈಕೆ, ಕೈಯಲ್ಲಿ ಕೋಲು ಹಿಡಿದುಕೊಂಡು ಇತರ ಇಬ್ಬರು ಪುರುಷರ ಜೊತೆ ಸಾಬರ್ ಮತಿ ಹಾಸ್ಟಲ್ ನ ಒಳಗೆ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವುದು ವೀಡಿಯೊಗಳಲ್ಲಿ ಕಂಡು ಬಂದಿತ್ತು.

ದೆಹಲಿ ಪೊಲೀಸರು ಈಗ ಅಕ್ಷತ್ ಅವಸ್ಥಿ, ರೋಹಿತ್ ಶಾ ಹಾಗು ಕೋಮಲ್ ಶರ್ಮಾಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 160 ರ ಪ್ರಕಾರ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News