ವಿರಾಟ್ ಕೊಹ್ಲಿ , ರೋಹಿತ್ ಶರ್ಮಾಗೆ ಐಸಿಸಿ ಪ್ರಶಸ್ತಿ

Update: 2020-01-15 11:52 GMT

ಮುಂಬೈ, ಜ.15:  ಅಂತರ್ ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಪ್ರಶಸ್ತಿ ಪ್ರಕಟಗೊಂಡಿದ್ದು ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಏಕದಿನ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ರೋಹಿತ್ ಶರ್ಮಾ ಐಸಿಸಿಯ  2019  ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

“ಈ ಪ್ರಶಸ್ತಿಯನ್ನು ನನಗೆ ನೀಡಿದ ಐಸಿಸಿಗೆ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ನೀಡಿದ ಬಿಸಿಸಿಐಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.”ಎಂದು ರೋಹಿತ್ ಹೇಳಿದರು.

ಓವಲ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್‌ರನ್ನು ಅಭಿಮಾನಿಗಳು ಟೀಕಿಸುವುದನ್ನು ನಿಲ್ಲಿಸಿದ್ದಕ್ಕಾಗಿ ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್'  ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ.

2019 ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ 7 ರನ್ ಗೆ  6 ವಿಕೆಟ್ ಉಡಾಯಿಸಿ  ತಂಡದ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದ ದೀಪಕ್ ಚಹರ್ ವರ್ಷದ ಟ್ವೆಂಟಿ -20  ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

"ಈ ಪ್ರಶಸ್ತಿ ನನಗೆ ಒಲಿದು ಬಂದಿರುವುದಕ್ಕೆ ತುಂಬಾ ಸಂತೋಷವಾಗಿದೆ." ಈ ಪ್ರಶಸ್ತಿಗಾಗಿ ಐಸಿಸಿಗೆ ಮತ್ತು ನನ್ನ ದೇಶವನ್ನು ಪ್ರತಿನಿಧಿಸಲು ನನಗೆ ಅವಕಾಶ ನೀಡಿದ ಬಿಸಿಸಿಐಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ”ಎಂದು ಚಹಾರ್  ಸಂತಸ ವ್ಯಕ್ತಪಡಿಸಿದರು.

ಐಸಿಸಿ ವರ್ಷದ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕನಾಗಿ ಕೊಹ್ಲಿಯನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News