×
Ad

ಕಾಂಗರೂ ದ್ವೀಪ: ಕೋಲಾಗಳ ಸಂಖ್ಯೆ 46,000ದಿಂದ 9,000ಕ್ಕೆ

Update: 2020-01-15 21:35 IST

ಕಾಂಗರೂ ದ್ವೀಪ (ಆಸ್ಟ್ರೇಲಿಯ), ಜ. 15: ಆಸ್ಟ್ರೇಲಿಯದ ಕಾಂಗರೂ ದ್ವೀಪದ ವನ್ಯಜೀವಿ ಉದ್ಯಾನದಲ್ಲಿರುವ ತಾತ್ಕಾಲಿಕ ಪ್ರಾಣಿ ಆಸ್ಪತ್ರೆಗೆ ಪ್ರತಿ ದಿನ ವಾಹನಗಳಲ್ಲಿ, ವಾಶಿಂಗ್ ಬಾಸ್ಕೆಟ್‌ಗಳಲ್ಲಿ ಮತ್ತು ವನ್ಯಜೀವಿ ಶುಶ್ರೂಕರಿಗೆ ಜೋತುಬಿದ್ದು ಡಝನ್‌ಗಟ್ಟಳೆ ಗಾಯಗೊಂಡ ಕೋಲಾಗಳು ಬರುತ್ತಿವೆ. ದಕ್ಷಿಣ ಆಸ್ಟ್ರೇಲಿಯದ ಕರಾವಳಿಯಿಂದ ಆಚೆಗಿರುವ ದ್ವೀಪದಲ್ಲಿರುವ ವನ್ಯಜೀವಿ ಧಾಮವನ್ನು ಸರ್ವನಾಶಗೊಳಿಸಿದ ಕಾಡ್ಗಿಚ್ಚಿನಲ್ಲಿ ಗಾಯಗೊಂಡಿರುವ ಅದೆಷ್ಟೊ ಕೋಲಾಗಳು ತುರ್ತು ಚಿಕಿತ್ಸೆಯ ಅಗತ್ಯದಲ್ಲಿವೆ.

ಕೆಲವು ಕೋಲಾಗಳು ಎಷ್ಟು ಗಂಭೀರವಾಗಿ ಗಾಯಗೊಂಡಿವೆಯೆಂದರೆ ಅವುಗಳಿಗೆಎ ದಯಾಮರಣವನ್ನು ನೀಡಲಾಗುತ್ತಿದೆ.

ಈ ವರ್ಷದ ಕಾಡ್ಗಿಚ್ಚಿನ ಮೊದಲು ಕಾಂಗರೂ ದ್ವೀಪದಲ್ಲಿ ಸುಮಾರು 46,000 ಕೋಲಾಗಳು ಇದ್ದವು ಎಂದು ಭಾವಿಸಲಾಗಿತ್ತು ಎಂದು ದಕ್ಷಿಣ ಆಸ್ಟ್ರೇಲಿಯ ಪ್ರಾಣಿ ತುರ್ತು ನಿರ್ವಹಣೆ ತಂಡದ ನಾಯಕ ಸ್ಟೀವನ್ ಸೆಲ್ವುಡ್ ಹೇಳಿದರು.

 ಆದರೆ, ಈಗ ಅಲ್ಲಿ ಸುಮಾರು 9,000 ಕೋಲಾಗಳು ಉಳಿದಿರಬಹುದು ಎಂದು ನಂಬಲಾಗಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News