ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ: ದೂರು

Update: 2020-01-15 16:21 GMT

ಪಡುಬಿದ್ರಿ, ಜ.15: ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರ ಸಂಘದ ಹೆಸರಿನಲ್ಲಿ ನಕಲಿ ಧೃಢೀಕರಣ ಪತ್ರ ಹಾಗೂ ನಕಲಿ ದಾಖ ಲಾತಿ ಸೃಷ್ಟಿಸಿ ಒಟ್ಟು 58 ಮಂದಿ ವಿವಿಧ ಬ್ಯಾಂಕ್‌ಗಳಿಂದ ಸರಕಾರದ ಸಹಾಯ ಧನ ಸೌಲಭ್ಯವನ್ನು ಅಕ್ರಮವಾಗಿ ಪಡೆದು ವಂಚಿಸಿರುವುದಾಗಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಜಮಾಡಿ ಮೀನುಗಾರರ ಪ್ರಾಥಮಿಕ ಸೇವಾ ಸಹಕಾರ ಸಂಘದ ನಕಲಿ ಲೆಟರ್ ಹೆಡ್‌ನಲ್ಲಿ ಶಿಪಾರಸ್ಸು ಪಡೆದು 44 ಮಂದಿ 2016ರಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ನ ಪಡುಬಿದ್ರಿ ಶಾಖೆಯಿಂದ ತಲಾ 50,000 ರೂ. ಸಹಾಯ ಧನ ಪಡೆದಿದ್ದರು. ಈ ಲೆಟರ್ ಹೆಡ್‌ನಲ್ಲಿ ಸಾಲಗಾರರ ಹೆಸರು ವಿಳಾಸ ಹಾಗೂ ಸಹಕಾರ ಸಂಘದ ಸದಸ್ಯರು ಎಂದು ಧೃಢೀಕರಿಸುತ್ತೇವೆ ಇತೀ ತಮ್ಮ ವಿಶ್ವಾಸಿ ಎಂದು ಬರೆದು ಕಾರ್ಯದರ್ಶಿ ಎಂದು ಮುದ್ರೆ ಒತ್ತಲಾಗಿದೆ ಮತ್ತು ಅದರಲ್ಲಿ ವಿನಯ ಮತ್ತು ಸುಜಾತ ಎಂದು ಬೇರೆ ಹೆಸರಿನಲ್ಲಿ ಸಹಿ ಮಾಡಿದ ದೃಢೀಕರಣ ಪತ್ರ ನೀಡಲಾಗಿದೆ ಎಂದು ದೂರಲಾಗಿದೆ.

ಇದೇ ರೀತಿ 13 ಮಂದಿ ಕಾರ್ಪೊರೇಶನ್ ಬ್ಯಾಂಕ್ ನಂದಿಕೂರು ಶಾಖೆ ಯಿಂದ ಸಹಾಯಧನವನ್ನು ಪಡೆದಿದ್ದಾರೆ. ಹೀಗೆ ಒಟ್ಟು 58 ಮಂದಿ ನಕಲಿ ದಾಖಲಾತಿ ಸೃಷ್ಟಿಸಿ ಮೂಲ ದೃಢೀಕರಣ ಪತ್ರ ಎಂದಾಗಿ ನಂಬಿಸಿ ಬ್ಯಾಂಕ್ ಗಳಿಗೆ ನೀಡಿ ಸರಕಾರಿ ಸವಲತ್ತನ್ನು ಅಕ್ರಮವಾಗಿ ಪಡೆದು ವಂಚಿಸಿರುವುದಾಗಿ ಸಂಘದ ಅಧ್ಯಕ್ಷ ತಾರಾನಾಥ ಸುವರ್ಣ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News