ಉಡುಪಿ ಜಿಲ್ಲಾ ಮಟ್ಟದ ಬ್ಯಾಸ್ಕೆಟ್ಬಾಲ್ ಪಂದ್ಯಾಟ

Update: 2020-01-15 16:36 GMT

ಮಣಿಪಾಲ, ಜ.15: ಉಡುಪಿ ಜಿಲ್ಲಾ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ವತಿಯಿಂದ ಮಾಹೆ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಸಹಭಾಗಿತ್ವದಲ್ಲಿ ಜ.18 ಹಾಗು 19ರಂದು ಮಣಿಪಾಲದ ಕೆಎಂಸಿ ಬ್ಯಾಸ್ಕೆಟ್ಬಾಲ್ ಕೋರ್ಟ್‌ನಲ್ಲಿ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯ ರಿಗೆ ಬ್ಯಾಸೆ್ಕಟ್ಬಾಲ್ ಪಂದ್ಯಾಟವನ್ನು ನಡೆಯಲಿದೆ.

ಉಡುಪಿ ಜಿಲ್ಲೆಯ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಬಹುದು. ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಸಂಸ್ಥೆಯ ಗುರುತು ಚೀಟಿಯನ್ನು ತರಬೇಕು.

ಆಸಕ್ತ ತಂಡಗಳು ತಮ್ಮ ಭಾಗವಹಿಸುವಿಕೆಯನ್ನು ಡಾ.ದೀಪಕ್‌ರಾಮ್ ಬಾಯರಿ (ಮೊ:9900410776) ಅಥವಾ ಈಮೈಲ್-deepak.bairy@manipal.edu  ಇಲ್ಲಿ ತಿಳಿಸುವಂತೆ ಸಂಘಟಕ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News