×
Ad

ಈ ವರ್ಷ ಬೀಟಿಂಗ್ ರಿಟ್ರೀಟ್‍ ನಲ್ಲಿ `ಅಬೈಡ್ ವಿದ್ ಮಿ' ಬದಲು `ವಂದೇ ಮಾತರಂ'

Update: 2020-01-16 19:28 IST

ಹೊಸದಿಲ್ಲಿ:  ಜನವರಿ 29ರಂದು ವಿಜಯ್  ಚೌಕ್‍ ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ವೇಳೆ  ನುಡಿಸಲಾಗುವ `ಅಬೈಡ್ ವಿದ್ ಮಿ' ರಾಗದ ಬದಲು `ವಂದೇ ಮಾತರಂ' ನುಡಿಸಲು ಕೇಂದ್ರ ಸರಕಾರ ಯೋಚಿಸುತ್ತಿದೆ.

"ಅಬೈಡ್ ವಿದ್ ಮಿ ಟ್ಯೂನ್ ಈ ಬಾರಿ ಕೈಬಿಡಲಾಗಿದೆಯೆಂಬ ಮಾಹಿತಿಯಿದೆ. ಪ್ರತಿ ವರ್ಷ ನುಡಿಸಲಾಗುವ ರಾಗಗಳನ್ನು ಪರಿಶೀಲಿಸಲಾಗುತ್ತದೆ. ಹೊಸ ರಾಗಗಳನ್ನು ಪರಿಚಯಿಸಲು, ಮುಖ್ಯವಾಗಿ ಭಾರತೀಯ ರಾಗಗಳನ್ನು ಪರಿಚಯಿಸುವ ಯತ್ನಗಳು ನಡೆಯುತ್ತಿವೆ'' ಎಂದು ಅಧಿಕಾರಿಗಳು ಹೇಳಿದ್ದಾರೆ.

`ಅಬೈಡ್ ವಿದ್ ಮಿ' ಮಹಾತ್ಮ ಗಾಂಧೀಜಿಯ ಇಷ್ಟದ ಹಾಡಾಗಿತ್ತು. ಈ ಪದ್ಯವನ್ನು ಸ್ಕಾಟಿಶ್ ಆಂಗ್ಲರಾಗಿರುವ ಹೆನ್ರಿ ಫ್ರಾನ್ಸಿಸ್ ಲೈಟ್ ಬರೆದಿದ್ದರು. ಕಳೆದ ವರ್ಷ ನುಡಿಸಲಾದ ಏಕೈಕ ಪಾಶ್ಚಿಮಾತ್ಯ ರಾಗ ಅದಾಗಿತ್ತು.
ಪ್ರತಿ ವರ್ಷ ಮೂರೂ ಸೇನಾ ಪಡೆಗಳ ಬ್ರಾಸ್ ಬ್ಯಾಂಡ್‍ ಗಳು `ಅಬೈಡ್ ವಿದ್ ಮಿ' ರಾಗ  ನುಡಿಸುತ್ತವೆ ಹಾಗೂ ಅದರ  ಅಂತ್ಯಕ್ಕೆ ರೈಸಿನಾ ಹಿಲ್ ದೀಪಗಳು ಪ್ರಜ್ಚಲಿಸಿ  ಕಾರ್ಯಕ್ರಮದ ಮುಕ್ತಾಯವನ್ನು ಸೂಚಿಸುತ್ತದೆ. ನಂತರ ಸಾರೇ ಜಹಾನ್ ಸೇ ಅಚ್ಛಾ ಹಾಡಿನ ರಾಗದೊಂದಿಗೆ  ಬ್ಯಾಂಡ್‍ ಗಳ ರಿಟ್ರೀಟ್ ನಡೆಯುತ್ತವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News