ಭಾರತದೊಂದಿಗಿನ ತಾಳೆ ಎಣ್ಣೆ ಆಮದು ವಿವಾದ: ಪರಿಹಾರಕ್ಕೆ ರಾಜತಾಂತ್ರಿಕ ಮಾರ್ಗ ಬಳಸಲು ಮುಂದಾದ ಮಲೇಶ್ಯ

Update: 2020-01-16 16:27 GMT

ಕೌಲಾಲಂಪುರ (ಮಲೇಶ್ಯ), ಜ. 16: ಮಲೇಶ್ಯದಿಂದ ಮಾಡಿಕೊಳ್ಳುವ ತಾಳೆ ಎಣ್ಣೆ ಆಮದಿನ ಮೇಲೆ ಭಾರತ ಕಳೆದ ವಾರ ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ, ವಿವಾದವನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸಲು ಮಲೇಶ್ಯ ನಿರ್ಧರಿಸಿದೆ ಎಂದು ಆ ದೇಶದ ಪ್ರಾಥಮಿಕ ಉದ್ಯಮ ಸಚಿವೆ ತೆರೇಸಾ ಕಾಕ್ ಗುರುವಾರ ಹೇಳಿದ್ದಾರೆ.

ಸಂಸ್ಕರಿತ ತಾಳೆ ಎಣ್ಣೆ ಆಮದಿನ ಮೇಲೆ ಭಾರತ ವಿಧಿಸಿರುವ ನಿರ್ಬಂಧವು ಕಳವಳಕ್ಕೆ ಕಾರಣವಾಗಿದೆ ಎಂದು ಉದ್ಯಮಿಗಳ ಸಭೆಯೊಂದರಲ್ಲಿ ಮಾತನಾಡಿದ ಅವರು ಹೇಳಿದರು. ‘‘ಈ ವರ್ಷ ನಮ್ಮ ಕೆಲವು ಮಹತ್ವದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸವಾಲುಗಳನ್ನು ಎದುರು ನೋಡುತ್ತಿದ್ದೇವೆ’’ ಎಂದರು.

‘‘ಈ ಬೆಳವಣಿಗೆಗಳ ಹೊರತಾಗಿಯೂ, ರಾಜತಾಂತ್ರಿಕ ಮಾರ್ಗಗಳನ್ನು ಬಳಸುವುದು ಸೇರಿದಂತೆ, ಈ ಆಮದು ಮಾರುಕಟ್ಟೆಗಳೊಂದಿಗೆ ಸಚಿವಾಲಯವು ನಿರಂತರವಾಗಿ ವ್ಯವಹರಿಸುವುದು ಹಾಗೂ ಸೌಹಾರ್ದಯುತ ಪರಿಹಾರವೊಂದನ್ನು ಕಂಡುಹಿಡಿಯಲು ಯತ್ನಿಸುವುದು’’ ಎಂದು ಸಚಿವೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News