ಜಗತ್ತಿನೊಂದಿಗೆ ಮಾತುಕತೆ ಸಾಧ್ಯ: ಇರಾನ್ ಅಧ್ಯಕ್ಷ

Update: 2020-01-16 16:36 GMT

ಟೆಹರಾನ್, ಜ. 16: ಅಮೆರಿಕದೊಂದಿಗಿನ ಅತಿ ಉದ್ವಿಗ್ನತೆಯ ಹೊರತಾಗಿಯೂ, ಜಗತ್ತಿನೊಂದಿಗೆ ಮಾತುಕತೆ ನಡೆಸುವುದು ಸಾಧ್ಯವಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಗುರುವಾರ ಹೇಳಿದ್ದಾರೆ ಹಾಗೂ ‘ಸೇನಾ ಸಂಘರ್ಷ ಅಥವಾ ಯುದ್ಧವನ್ನು ತಡೆಯಲು’ ಇರಾನ್ ಪ್ರತಿ ದಿನವೂ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿಯನ್ನು ಅಮೆರಿಕದ ವಾಯು ಪಡೆ ಇರಾಕ್‌ನಲ್ಲಿ ಹತ್ಯೆ ಮಾಡಿದ ಬಳಿಕ, ಜನವರಿ 8ರಂದು ಇರಾಕ್‌ನಲ್ಲಿರುವ ಅಮೆರಿಕ ಸೇನೆಯ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು.

‘‘ಯುದ್ಧ ಅಥವಾ ಸೇನಾ ಸಂಘರ್ಷವನ್ನು ತಡೆಯಲು ನಮ್ಮ ಸರಕಾರವು ಪ್ರತಿ ದಿನ ಕೆಲಸ ಮಾಡುತ್ತಿದೆ’’ ಎಂದು ಟೆಲಿವಿಶನ್‌ನಲ್ಲಿ ಮಾಡಿದ ಭಾಷಣದಲ್ಲಿ ರೂಹಾನಿ ಹೇಳಿದರು. ಅಂತರ್‌ರಾಷ್ಟ್ರೀಯ ಸಮುದಾಯದೊಂದಿಗೆ ಮಾತುಕತೆ ಕಷ್ಟವಾದರೂ, ‘ಸಾಧ್ಯವಾಗಲಿದೆ’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News